Posts

ಆಧುನಿಕ ವೃತ್ತಿಪರ ಶಿಕ್ಷಣದ ಒಳನೋಟ

Image
ಜಗತ್ತಿನಲ್ಲಿ ಒಂದಷ್ಟು ಮಂದಿ ಸಂತೋಷಕ್ಕಾಗಿ ಕೆಲಸ ಮಾಡಿದರೆ, ಇನ್ನೊಂದಷ್ಟು ಜನ ಹಣಕ್ಕಾಗಿಯೇ ಕೆಲಸ ಮಾಡುತ್ತಾರೆ. ಒಂದು ಕಾಲದಲ್ಲಿ ವಸ್ತುವಿನಿಮಯ ಪದ್ಧತಿಯ ಬದಲು ಜಾರಿಗೆ ಬಂದ ಹಣ ಇಂದು ಶ್ರೀಮಂತಿಕೆಯ ಕುರುಹಾಗಿ, ತಾರತಮ್ಯದ, ಆಡಂಬರದ, ಅಧಿಕಾರಶಾಹಿಯ, ಸೊಕ್ಕಿನ, ಶೋಷಣೆಯ ಅಸ್ತ್ರವಾಗಿರುವುದು ದುರದೃಷ್ಟಕರ. ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿಯೇ ಬದುಕುವುದು - ಇವೆರಡೂ ಬೇರೆಬೇರೆ. ತಿನ್ನಲಿಕ್ಕಾಗಿಯೇ ಬದುಕುವವರು ಹಣದ ಉದ್ದೇಶಕ್ಕಾಗಿಯೇ ವಿವಿಧ ವೃತ್ತಿಗಳನ್ನು ಮಾಡುತ್ತಾರೆ. ವಿವಿಧ ವೃತ್ತಿಪರ ಅಧ್ಯಯನ, ತರಬೇತಿ ಘಟಕಗಳನ್ನು, ಮಹಾವಿದ್ಯಾಲಯ, ವಿಶ್ವವಿದ್ಯಾಲಯಗಳನ್ನು ಪ್ರತ್ಯೇಕ ವಿಷಯಗಳ ಪರಿಣಿತರನ್ನು ತಯಾರುಗೊಳಿಸಲಿಕ್ಕಾಗಿ ತೆರೆಯಲಾಗಿದೆ. ಆದರೆ ವೃತ್ತಿಪರತೆಯ ಭರಾಟೆಯಲ್ಲಿ ಕಲೆ - ಭಾಷೆ - ತತ್ತ್ವಶಾಸ್ತ್ರಗಳ ತಿರುಳನ್ನು, ಮೂಲವಿಜ್ಞಾನವನ್ನು ಗ್ರಹಿಸಿಕೊಳ್ಳುವ ಸೂಕ್ಷ್ಮತೆಯನ್ನು ಅನೇಕರು ಕಳೆದುಕೊಂಡಿದ್ದಾರೆ. ವೃತ್ತಿಪರತೆಯನ್ನು ಬಹಳ ಮಂದಿ ಗಳಿಸಿಕೊಂಡು ಸಾಕಷ್ಟು ದುಡ್ಡು ಸಂಪಾದಿಸಿದರೂ ಅವರಲ್ಲಿ ಎಲ್ಲರೂ ನಿಜಕ್ಕೂ ಪಂಡಿತರಾಗಿಲ್ಲ. ಹೀಗಾಗಿ ಈ ಮಹಾಜಗತ್ತಿನಲ್ಲಿ ಈಗ ದುಡ್ಡು ಎಂಬುದು ಯಾರು ಶ್ರೇಷ್ಠ - ಯಾರು ಶ್ರೇಷ್ಠರಲ್ಲ, ಯಾರು ಜ್ಞಾನಿ - ಯಾರು ಜ್ಞಾನಿಯಲ್ಲ ಎಂಬುದನ್ನು ಗುರುತಿಸುವ ಒಂದು ಮಾನದಂಡವಂತೂ ಆಗಿಯೇ ಇಲ್ಲ. ಹಣಸಂಪಾದನೆಯ ಉದ್ದೇಶದಿಂದ ವಿದ್ಯಾಭ್ಯಾಸವನ್ನಾಗಲೀ, ಯಾವುದೇ ಒಂದು ಉದ್ಯೋಗವ...

ಆದರ್ಶ ಗುರು, ಆತ್ಮೀಯ ಸ್ನೇಹಿತ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್

Image
ಜೀವನದಲ್ಲಿ ಕೆಲವು ಮಹಾತ್ಮರು ನಮಗೆ ಅಕಸ್ಮಾತ್ ಸಿಗುತ್ತಾರೆ. ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಆದರ್ಶ ನಡೆ-ನುಡಿಗಳಿಂದ ಪ್ರಜ್ವಲಿಸುತ್ತಾರೆ. ಅಂತಹ ಒಬ್ಬರು ಅಪರೂಪದ ಆದರ್ಶ ವ್ಯಕ್ತಿ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್. ಶ್ರೀಯುತರು ಒಬ್ಬರು ಆದರ್ಶ ಕನ್ನಡ ಉಪನ್ಯಾಸಕರು ಎಂದು ಮನದುಂಬಿ ನಾನು ನನ್ನ ಖಾಸಗಿ ಬ್ಲಾಗ್‌ನಲ್ಲಿ  ಬರೆದುಕೊಳ್ಳುವಾಗ ನನ್ನ ಕಣ್ಣಾಲಿಗಳೇಕೋ ಭಾವಪೂರ್ಣವಾಗಿ ತೇವವಾಗುತ್ತಿವೆ. ನಾನು ಅಡ್ಯನಡ್ಕ ಜನತಾ ಪ್ರೌಢಶಾಲೆಗೆ ಅಧ್ಯಾಪಕನಾಗಿ ಸೇರಿದ ಸರಿಸುಮಾರು ಒಂದು ವರ್ಷದಲ್ಲಿ ಶ್ರೀಯುತ ಶೀನಪ್ಪ ನಾಯ್ಕರ ಪರಿಚಯವಾಗಿತ್ತು. ಅವರು ಜನತಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಯನ್ನು ಅಲಂಕರಿಸಿದ್ದರು. ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಭಾಷೆಯ ಬೆಳವಣಿಗೆ, ಕನ್ನಡ ಸಂಸ್ಕೃತಿಯ ಉಳಿವು, ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವತೋಮುಖ ವಿಕಾಸಕ್ಕಾಗಿ ನಿರಂತರ ಪರಿಶ್ರಮಿಸಿದ ಒಬ್ಬರು ಅಪ್ಪಟ ಆದರ್ಶ ವ್ಯಕ್ತಿ ಎಂಬ ಚಾರಿತ್ರ್ಯ ಇವರಿಗಿತ್ತು. ಹಲವಾರು ಸಾಹಿತ್ಯ ಸಮ್ಮೇಳನ, ಫೆಸ್ಟ್‌ಗಳಲ್ಲಿ ಇವರ ನಿರೂಪಣೆ ಆಕರ್ಷಕವಾಗಿರುತ್ತಿತ್ತು. ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಇವರು ಕನ್ನಡ ಉಪನ್ಯಾಸಕರಾದ ಬಳಿಕ, ಸದ್ದಿಲ್ಲದೇ ಕನ್ನಡ ಉಳಿಸುವ ಕೈಂಕರ್ಯವನ್ನು ನಡೆಸುತ್ತಲೇ ಬಂದಿದ್ದಾರೆ. ಕಾಲೇಜಿನ ಯಾವುದೇ ಕಾರ್ಯಕ್ರಮಗಳಲ್ಲಿ ಇವರ ಸರಳ - ಸುಂದರ, ಪಾಂಡಿತ್ಯಪೂರ್ಣ ನಿರೂಪಣೆ ಆಕರ್ಷ...

ಪ್ರಶಾಂತಿ ವಿದ್ಯಾಲಯ ( ಆಶುಕವನ )

Image
ಪ್ರಶಾಂತಿ ವಿದ್ಯಾಲಯ, ಇದು ಜ್ಞಾನದ ದೇವಾಲಯ; ಅರಿವಿನ ಆಗರ, ಮೆರುಗಿನ ಸಾಗರ, ಮಕ್ಕಳ ನೆಚ್ಚಿನ ನಿಲಯ. ವಿಧವಿಧ ವಿದ್ಯೆ, ಕೌಶಲ ಗಳಿಸಿ ಬೆಳೆಯಲು ಸುಂದರ ತಾಣ; ಉಜ್ವಲ ಜೀವನ ರೂಪಿಸಿಕೊಳ್ಳಲು ಅನುಗುಣ ಇಲ್ಲಿಯ ಆವರಣ. ಆಟ - ಪಾಠ, ನಡತೆ - ನಿಯತ್ತು ಕಲಿಯುತ ಕೀರ್ತಿಯ ಪಡೆಯೋಣ; ಗುರುಗಳ ಮಾತು, ಹಿರಿಯರ ಹೊನ್ನುಡಿ ಪಾಲಿಸಿ ಮುನ್ನಡೆಯೋಣ. ಇದು ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇಲ್ಲಿಗೆ ದಿನಾಂಕ 31-08-2022ರಂದು ಗಣೇಶ ಚತುರ್ಥಿ ಪ್ರಯುಕ್ತ ಮುಖ್ಯ ಅತಿಥಿಯಾಗಿ ತೆರಳಿದ ಸಂದರ್ಭದಲ್ಲಿ ಸ್ಫುರಿಸಿದ ಆಶುಕವನ. ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇಲ್ಲಿ ನಡೆದ ವಿದ್ಯಾಗಣಪತಿ ಮಹೋತ್ಸವದಲ್ಲಿ ಧಾರ್ಮಿಕ ಉಪನ್ಯಾಸಕ್ಕಾಗಿ ಅಧ್ಯಾಪಕ ಮಿತ್ರರಾದ ಸಹೃದಯಿ, ಸನ್ಮಾನ್ಯ ಶ್ರೀ ರಾಮಕೃಷ್ಣ ಬಲ್ಲಾಳ್ ಅವರು ಆಹ್ವಾನಿಸಿದ್ದರು. ನನ್ನ ಚಿಂತನೆಗಳಿಗೆ ಧಾರ್ಮಿಕ ಉಪನ್ಯಾಸದ ಚೌಕಟ್ಟು ಒದಗಿಸಿ ಪ್ರೋತ್ಸಾಹಿಸಿದ ಅವರಿಗೂ, ಗೌರವಿಸಿದ ಪ್ರಶಾಂತಿ ಸೇವಾ ಟ್ರಸ್ಟ್‌ನ ಅಧ್ಯಕ್ಷರು, ಉಪಾಧ್ಯಕ್ಷರಾದ ಶ್ರೀ ಪೆಲತ್ತಡ್ಕ ರಾಮಕೃಷ್ಣ ಭಟ್, ಸರ್ವ ಸದಸ್ಯರು, ಪ್ರಶಾಂತಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶ್ರೀ ಅನೂಪ್ ಸರ್, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ, ತಾಂತ್ರಿಕವಾಗಿ ಶ್ರಮಪಟ್ಟು ನಿರ್ವಹಿಸಿದ ಗೌರವಾನ್ವಿತ ಅಧ್ಯಾಪಕ ವೃಂದದವರು ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆಗಳು. ಪ್ರಶಾಂತಿ ವಿದ್ಯಾಕೇಂದ್ರದ ಕ್ಯಾಂಪ...

ಮೆರವಣಿಗೆ

Image
ಕಾಡುತಿಹ ಮೌನದ ಆಚೆ ಕಾಣಬಹುದೊಂದು ಮಜಲು; ಆಶಿಸಿದೆ ನನ್ನ ಮನ ತಪಿಸಿ, ತಡಕಾಡಿ.... ಬೀರುತಿಹ ಬಿಂಕದ ಆಚೆ ತೋರಬಹುದೊಂದು ಅಮಲು; ಕಾಯುತಿದೆ ಬಣ್ಣಬಣ್ಣದ ಖಾಸಗಿ ಮಹಲು. ದೀಪಗಳು ಬೆಳಗಿವೆ, ಗಂಟೆಗಳು ಮೊಳಗಿವೆ; ಪ್ರಣಯದ ಹಾಡಿಗೆ ಹುಟ್ಟುತಿದೆ ಸಂಗೀತ. ರಾತ್ರಿಗಳು ನೂರಾರು ಕಥೆಗಳ ಹೊತ್ತು ತರುತಲಿದೆ; ಆಕಾಶದಲ್ಲಿ ಬಣ್ಣಗಳ ಮೆರವಣಿಗೆ ಬರುತಲಿದೆ. ಸ್ವಾಗತವೂ ವಂದನೆಯೂ ಸಂತೋಷಕ್ಕಾಗಿ; ಹೃದಯದ ಮಿಡಿತಕ್ಕೀಗ ಪದವೊಂದು ಬೇಗ ಮೂಡಲಿ. ಸಂಕಟವ ಮರೆತ ಸಲ್ಲಾಪ ನನ್ನ ನಿನ್ನ ಇನಿದನಿ; ಸಾಂಗತ್ಯದಿಂದ ಹರಿಯಲಿ ಅಮೃತದ ವಾಹಿನಿ. ✍️ಶಿವಕುಮಾರ ಸಾಯ

ಕ್ವಾಂಟಮ್ ಭೌತಶಾಸ್ತ್ರ ಮತ್ತು ಭಾರತೀಯ ತತ್ತ್ವಶಾಸ್ತ್ರ

Image
ಭೌತಶಾಸ್ತ್ರದಲ್ಲಿ ಜಗತ್ತಿನ ಎಲ್ಲ ವಸ್ತುಗಳಲ್ಲಿರುವ ಕಣದ ಸ್ವರೂಪ, ಶಕ್ತಿಯ ಬಗ್ಗೆ ಅಧ್ಯಯನ ಮಾಡುವುದಕ್ಕೆ ಕ್ವಾಂಟಮ್ ಭೌತಶಾಸ್ತ್ರ ಎನ್ನುತ್ತಾರೆ. ಆಧುನಿಕ ಭೌತಶಾಸ್ತ್ರದ ಇತ್ತೀಚೆಗಿನ ಅಧ್ಯಯನಗಳು ಕ್ವಾಂಟಮ್ ಮೆಕ್ಯಾನಿಕ್ಸ್ ಬಗ್ಗೆ ತೃಪ್ತಿಕರ ವಿವರಣೆ ನೀಡುವಲ್ಲಿ ಯಶಸ್ವಿಯಾಗಿವೆ. ಯಾವುದೇ ಒಂದು ಕಣ, ಇಲೆಕ್ಟ್ರಾನ್, ವಸ್ತು ಅಥವಾ ವ್ಯವಸ್ಥೆಯನ್ನು ನಾವು ಕಾಣುವುದು ಕೇವಲ ಮಾಯೆ. ವಾಸ್ತವವಾಗಿ ಕಣ ಇರುವುದಿಲ್ಲ ಅಥವಾ ಅದು ವ್ಯಕ್ತವಾಗುತ್ತಿರುವ, ಅನುಭವಕ್ಕೆ ಬರುವ ಒಂದು ವಿದ್ಯಮಾನ ಮಾತ್ರ. ಶಕ್ತಿಯು ಪ್ರವಹಿಸುತ್ತಲೇ ಇರುವುದರಿಂದ ಒಂದು ಕಣವು ವಿಶ್ವದ ಎಲ್ಲಾ ಕಣಗಳೊಂದಿಗೆ ಸಂಪರ್ಕದಲ್ಲಿರುತ್ತದೆ ಎನ್ನಲಾಗಿದೆ. ಆಧ್ಯಾತ್ಮಿಕ ಪ್ರಕ್ರಿಯೆಯ ಮೂಲಕ ಸಾಧನೆ ಮಾಡುವುದಕ್ಕೆ ಅನುಭಾವ ಒಂದು ಆಧಾರ. ಆದರೆ ಅನುಭಾವವನ್ನು ವಿವರಿಸುವುದು ಕಷ್ಟ ಮತ್ತು ಅದನ್ನು ಅವೈಜ್ಞಾನಿಕವೆಂದು ತಿಳಿಯುವವರಿದ್ದಾರೆ. ಆದರೆ ಆಧುನಿಕ ಭೌತಶಾಸ್ತ್ರದ ತತ್ತ್ವಗಳು ಭಾರತೀಯ ತತ್ತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಅನುಭವಗಳ ಮೂಲಕ ವಿಜ್ಞಾನಿಗಳು ಹೇಳಿಕೊಂಡ ವಿಷಯಗಳಾಗಿವೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಭೌತಶಾಸ್ತ್ರದಲ್ಲಿ, ಆರಂಭಿಕವಾಗಿ, ಜಗತ್ತಿನ ಎಲ್ಲ ವಸ್ತುಗಳೂ ಅಣುಗಳಿಂದ ಮಾಡಲ್ಪಟ್ಟಿವೆ; ಅಣುವಿನಲ್ಲಿ ಪರಮಾಣುಗಳು ಇರುತ್ತವೆ; ಪರಮಾಣುವಿನೊಳಗೆ ಧನಾತ್ಮಕ ಶಕ್ತಿ ಹೊಂದಿರುವ ಪ್ರೋಟಾನ್, ತಟಸ್ಥವಾಗಿರುವ ನ್ಯೂಟ್ರಾನ್ ನ್ಯೂಕ್ಲಿಯಸ್‌ನಲ್ಲಿದ್ದು, ಇಲ...

ಅನಂತ ಅನುಗ್ರಹ, ಅಪರಿಮಿತ ಪ್ರೀತಿ.... ಇದು ಬ್ರಹ್ಮಾಂಡದ ಪರಮ ಕೃಪೆ, ಶಕ್ತಿ!

Image
ಲೋಕ ನಡೆಯುತ್ತಿರುವುದು ಅಗಾಧವಾದ ಅನುಗ್ರಹದಿಂದ ಮಾತ್ರ! ಇಲ್ಲಿ ಭೂಮಿ ಮತ್ತು ಚಂದ್ರನ ನಡುವಿನ ದೂರ, ಭೂಮಿ ಮತ್ತು ಸೂರ್ಯನ ನಡುವಿನ ದೂರ, ಚಲನೆಗಳು, ವಿವಿಧ ಆಕಾಶಕಾಯಗಳಿಗೆ ಇರುವ ದ್ರವ್ಯರಾಶಿ, ಗುರುತ್ವ ಇವೆಲ್ಲ ಈ ಅನುಭವದ ಕೇಂದ್ರವಾಗಿರುವ 'ನಾನು' ಬದುಕುವುದಕ್ಕೆ ಎಷ್ಟೊಂದು ಪರ್ಫೆಕ್ಟ್ ಆಗಿ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ! ಅದಕ್ಕಾಗಿ ನನ್ನ ಅನಂತ ಕೃತಜ್ಞತೆಗಳು. ಹೌದು. ಭೌತಶಾಸ್ತ್ರದ ಕ್ವಾಂಟಮ್ ಫಿಸಿಕ್ಸ್‌ಗೆ ಇಲ್ಲಿ ಅಷ್ಟೊಂದು ಮಹತ್ವವಿದೆ. ಎಲ್ಲಾ ಮೂಲವಸ್ತುಗಳ, ಪದಾರ್ಥಗಳ, ಯೌಗಿಕಗಳ, ಎಲ್ಲಾ ರೂಪರೂಪಗಳ ಹಿಂದೆಯೂ ಇಂತಹ ಒಂದು ಚೈತನ್ಯದ ಮಹಾಪ್ರವಾಹವೇ ಇದೆ. ಪ್ರತಿಯೊಂದು ಇಲೆಕ್ಟ್ರಾನ್ ಇಲ್ಲಿ ಸ್ಥಾನಪಲ್ಲಟವಾಗುತ್ತಾ ಚೇತನವು ವಿವಿಧ ಚೈತನ್ಯದ ರೂಪಗಳಾಗಿರುತ್ತಾ ಒಟ್ಟು ಶಕ್ತಿ ಒಂದೇ ಆಗಿರುವ, ಹಾಗಿದ್ದರೂ ಅದರ ಪ್ರಮಾಣ ಅಪರಿಮಿತ, ಅನಂತ ಆಗಿರುವ ರೋಚಕ ವ್ಯವಸ್ಥೆ ಇದು. ಇಲ್ಲಿ 'ತಾನು' ಎಂದು ಭಾವಿಸುವಲ್ಲಿ ಮಾತ್ರ ತಾನು ಇರಬಲ್ಲೆ ಎಂಬುದು ಹೊಳೆಯಲೇ ಬೇಕು. ಏಕೆಂದರೆ ಇಂತಹ ಇರುವಿಕೆ ಅದ್ಭುತ ಕನಸಲ್ಲಿ ಮಾತ್ರ ಸಾಧ್ಯ! ಅದಕ್ಕೆ ಇದು ಅಂತಹ ಮಹಾನ್ ಮಹಾನ್ ಕನಸು! ನಾವು ಕನಸು ಎನ್ನುವುದು ಏನನ್ನು? ಹುಲಿಯೊಂದು ಆಕಾಶಕ್ಕೆ ಜಿಗಿದಂತೆ ಕಾಣುವ ಘಟನೆ - ಅಸಂಬದ್ಧವೂ, ಅಸಂಭವವೂ ಎನಿಸುವಂತಿದ್ದರೆ ಅದು ಕನಸಲ್ಲಿ ಮಾತ್ರ ಎನ್ನುತ್ತೇವೆ. ಅಂದರೆ ತುಂಬಾ ವಿಚಿತ್ರವಾದುದನ್ನು, ಪವಾಡದಂತಿರುವುದನ್ನು ನಾವು ಕನಸ...

ಪ್ರತಿಭೆ ಮತ್ತು ಶ್ರಮ ವಿಭಜನೆ

Image
ಎಲ್ಲ ಮನುಷ್ಯರಲ್ಲೂ ಒಂದೊಂದು ಬಗೆಯ ಪ್ರತಿಭೆ ಇರುತ್ತದೆಯಂತೆ. ಆದರೆ ಪ್ರತಿಭೆ ಒಂದು ಸ್ವರೂಪವನ್ನು ಪಡೆಯಬೇಕಾದರೆ ಮನುಷ್ಯನು ಒಂದು ಕ್ಷೇತ್ರದಲ್ಲಿ, ಒಂದು ವಿಭಾಗದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಕೆಲವರಿಗೆ ಸಂಗೀತ, ಕೆಲವರಿಗೆ ಸಾಹಿತ್ಯ, ಕೆಲವರಿಗೆ ಕ್ರೀಡೆ, ಕೆಲವರಿಗೆ ವ್ಯಾಯಾಮ, ಕೆಲವರಿಗೆ ಅಧ್ಯಾತ್ಮ, ಕೆಲವರಿಗೆ ತಂತ್ರಜ್ಞಾನ ಹೀಗೆ ಒಬ್ಬೊಬ್ಬರಿಗೂ ಒಂದಲ್ಲ ಒಂದು ವಿಷಯ ಇಷ್ಟವಾಗುವಂಥದ್ದು ಇರುತ್ತದೆ. ಇನ್ನು ಕೆಲವರಿಗೆ ಒಂದಕ್ಕಿಂತ ಹೆಚ್ಚು, ಹಲವು ವಿಷಯಗಳು ಇಷ್ಟವಾಗುತ್ತವೆ ಮತ್ತು ಆಸಕ್ತಿಯೂ ಇರುತ್ತದೆ. ಹಲವು ವಿಷಯಗಳಲ್ಲಿ ಆಸಕ್ತಿ ಉತ್ತಮವೇ ಆದರೂ ದೂರದೃಷ್ಟಿಯಿಂದ ನೋಡಿದಾಗ ಒಂದು ವಲಯದಲ್ಲಿ ನಿಮಗಷ್ಟೇ ಆಸಕ್ತಿ ಇರುವ, ನಿಮಗಷ್ಟೇ ವಿಷಯಜ್ಞಾನವಿರುವ ವಿಭಾಗದಲ್ಲಿ ಮಾತ್ರವೇ ಕನ್ಸಿಸ್ಟೆಂಟ್ ಆಗಿ ತೊಡಗಿಕೊಳ್ಳುವುದು ಉತ್ತಮ. ಹಲವರಿಗೆ ಸಾಹಿತ್ಯ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ನೀವು ಬರೆಯಬೇಕಿಲ್ಲ. ಹಲವರಿಗೆ ಸಂಗೀತದ ಪ್ರೀತಿ ಇರುತ್ತದೆ ಎನ್ನುವುದಕ್ಕೆ ನಿಮಗೆ ಸಂಗೀತ ಮಾಧ್ಯಮವಾಗಬೇಕಿಲ್ಲ. ಎಲ್ಲರೂ ಟಿವಿ, ಸಿನಿಮಾ ನೋಡುತ್ತಾರೆ ಎನ್ನುವ ಕಾರಣಕ್ಕೆ ನೀವು ಅದನ್ನು ಅನುಕರಿಸಬೇಕಿಲ್ಲ. ನಿಮ್ಮ ಅಂತರಂಗದಲ್ಲಿ ಬಲವಾದ ಪ್ರಚೋದನೆಯಿದ್ದಾಗ ಮಾತ್ರವೇ ನೀವು ಯಾವುದೇ ಕೆಲಸವನ್ನು ಮಾಡುತ್ತೀರಿ. ಹಾಗೆಯೇ ಮಾಡಬೇಕು ಕೂಡಾ. ಇನ್ನು, ಒಬ್ಬ ವ್ಯಕ್ತಿ ಎಲ್ಲದರಲ್ಲೂ ತೊಡಗಿಕೊಳ್ಳುವುದರಿಂದ ಒಮ್ಮೊಮ್ಮೆ ಆತನ ವಿಶ...