ಕೊಳಲ ದನಿ

ಶ್ರೀಕೃಷ್ಣನ ಮುಕುಟದಲ್ಲಿ
ಎಷ್ಟೊಂದು
ನವಿಲುಗರಿಗಳು!

ಶ್ರೀಹರಿಗೆ
ಹಾರವಾದವು
ಅದೆಷ್ಟೋ ಮಣಿಗಳು!

ನಾರಾಯಣನ ನಂಬಿ
ಎನಿತೋ ನರರು
ವೀರ ಅರ್ಜುನರಾದರು

ವಾಮನ ಬೆಳೆದು
ವಿಶ್ವರೂಪವ ತೋರಿ
ತ್ರಿವಿಕ್ರಮನಾದನು

ನಂದಕುಮಾರನ ವೃಂದಾವನದಲ್ಲಿ
ಅರಳಿದವು
ನೂರಾರು ಹೂವುಗಳು

ಶ್ರೀರಂಗನಿಗೆ ಕೈಮುಗಿದು
ನಲಿದರು
ಹದಿನಾರು ಸಾವಿರ
ಗೋಪಿಕೆಯರು

ಕೃಷ್ಣನ
ಕೊಳಲ ದನಿ ಕೇಳಿ ಬಂದವು
ಗೋಕುಲಕೆ
ಹಿಂಡು ಹಿಂಡು ಗೋವುಗಳು.

✍️ ಶಿವಕುಮಾರ ಸಾಯ

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಕೃತಜ್ಞತೆಯ ಮಹಾಪ್ರವಾಹ: ಭವ್ಯ ಜೀವನಯಾತ್ರೆಗೆ ಮೌನವಾಗಿ ಬೆಳಕಾದ ಮಹಾ ಚೇತನಗಳಿಗೆ ಭಕ್ತಿಪೂರ್ವಕ ಅರ್ಪಣೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಖರತೆ: ಪರಾಶರ ಮತ್ತು ಕೆ.ಪಿ. ಪದ್ಧತಿಗಳ ಅಪೂರ್ವ ಸಮನ್ವಯ