Shivakumar Saya - About me here.....
[] Poet, writer, teacher & astrologer [] Qualified M.A., B.Ed., UGC - NET, JRF [] Former sub-editor/journalist at Print media [] Havyaka Brahmins [] Single ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಸಾಯ ಎಂಬ ಊರಿನವರಾದ ಶ್ರೀ ಶಿವಕುಮಾರ್ ಸಾಯ ಕವಿ, ಸಾಹಿತಿ, ಅಧ್ಯಾಪಕರು. ಕನ್ನಡ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿ. ಎಡ್. ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ನವದೆಹಲಿ ಇವರು ನಡೆಸುವ 'ಉಪನ್ಯಾಸಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆ'ಯಲ್ಲಿ ಒಂದೇ ಪ್ರಯತ್ನದಲ್ಲಿ ಜೆಆರ್‌ಎಫ್ ರ್‍ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರ ನೂರಾರು ಕವಿತೆಗಳು ಹಾಗೂ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳು, ವಿಶೇಷ ಸಂಚಿಕೆಗಳು, ಸಂಪಾದನೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಮತ್ತಿತರ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಬಹುಮಾನಗಳನ್ನು, ಪುರಸ್ಕಾರಗಳನ್ನು ಪಡೆದಿದ್ದಾರೆ. 'ತೆರೆದ ಅಧ್ಯಾಯ' ಎಂಬ ಒಂದು ಡಿಜಿಟಲ್ ಕವನ ಸಂಕಲನ ಮತ್ತು 'ನಗುವ ಹೂ' ಎಂಬ ಒಂದು ಮಕ್ಕಳ ಕವನ ಸಂಕಲನ ಪ್ರಕಟವಾಗಿದೆ. 'ಅಮೃತವಾಹಿನಿ' ಎಂಬ ಸಂಘಟನೆಯ ಅಧ್ಯಕ್ಷರಾಗಿ ಪ್ರತಿಭಾವಂತ ಯುವಜನರನ್ನು ಒಗ್ಗೂಡಿಸುವಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ವೇದಾಂಗ ಜ್ಯೋತಿಷ್ಯ ಕೇಂದ್ರವನ್ನು ಸ್ಥಾಪಿಸಿ ಆ...