Posts

Showing posts from October, 2019

🔶 ತೆರೆದ ಅಧ್ಯಾಯ 🔶

Image
🔶 ತೆರೆದ ಅಧ್ಯಾಯ 🔶 ಇದು ವಿವಿಧ ನಿಯತಕಾಲಿಕಗಳಲ್ಲಿ ಕಳೆದ ಎರಡು ದಶಕಗಳಲ್ಲಿ ಪ್ರಕಟವಾದ ನನ್ನ ಕವನಗಳನ್ನು ಆಯ್ದು ತಯಾರಿಸಿದ ಗುಚ್ಛ. 250 ಪುಟಗಳ ಈ ಪಿಡಿಎಫ್ ಸ್ವರೂಪದ ಕೃತಿಗೆ ಭರ್ಜರಿ ಪ್ರಚಾರ ನೀಡಿದ ಸ್ನೇಹಿತರಿಗೂ, ಮಾಧ್ಯಮಗಳಿಗೂ ಕೃತಜ್ಞತಾರ್ಪಣೆ. ವಂದನೆಗಳು. https://kannada.oneindia.com/news/bengaluru/poem-collections-of-shivakumar-saya-now-available-in-google-144148.html https://news13.in/archives/109732 http://www.suddi9.com/?p=105555 https://drive.google.com/file/d/1o582n0ul3pCBG7-x_4jnCHZzdFvpASd_/view?usp=drivesdk

ಹಿತಮಿತವಾಗಿದ್ದರೆ ಎಲ್ಲವೂ ಉತ್ತಮವೇ!

Image
"ಅತಿರೂಪಾತ್ ಹೃತಾ ಸೀತಾ ಅತಿಗರ್ವಾತ್ ರಾವಣೋ ಹತಃ | ಅತಿದಾನಾತ್ ಬಲಿರ್ಬದ್ಧಃ ಅತಿ ಸರ್ವತ್ರ ವರ್ಜ್ಯಯೇತ್||" - ಸಂಸ್ಕೃತ ಸುಭಾಷಿತಕಾರನೊಬ್ಬ ಲೋಕಸತ್ಯವನ್ನು ಸರಳವಾಗಿ ಹೇಳಿದ್ದು ಹೀಗೆ. ಅತಿ ರೂಪದಿಂದಾಗಿ ಸೀತೆ ಅಪಹರಣಕ್ಕೊಳಗಾದಳು. ಅತಿ ಗರ್ವದಿಂದಾಗಿ ರಾವಣ ಹತನಾದ. ಅತಿ ದಾನಬುದ್ಧಿಯಿಂದಾಗಿ ಬಲಿ ಪಾತಾಳಕ್ಕೆ ತಳ್ಳಲ್ಪಟ್ಟ. ಆದುದರಿಂದ ಸರ್ವತ್ರ ಈ ಅತಿಯನ್ನು ಬಿಟ್ಟುಬಿಡಬೇಕು ಎಂಬುದು ಅವನ ಮಂತ್ರ. "ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ ।ಹಿತವಿರಲಿ ವಚನದಲಿ, ಋತವ ಬಿಡದಿರಲಿ ।।ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ । ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ।।" ಈ ಮಾತನ್ನು ಕನ್ನಡ ಕವಿ ಡಿ. ವಿ. ಗುಂಡಪ್ಪನವರು ಹೇಳಿದ್ದಾರೆ. ಅತಿಯಾದರೆ ಅಮೃತವೂ ವಿಷವಾಗಿಬಿಡುತ್ತದೆ ಎನ್ನುತ್ತಾರೆ. ಮೌನ ಒಳ್ಳೆಯ ಲಕ್ಷಣ. ಆದರೆ ಅದೇ ಅತಿಯಾದರೆ ಬಂಧನವೇ. ವಿನಯ ಒಳ್ಳೆಯ ಲಕ್ಷಣ. ಹಾಗೆಂದು ಕೇವಲ ನಮ್ರತೆಯೊಂದೇ ಉಳಿದು ಬರೀ ಸಾತ್ವಿಕ ಕ್ರೋಧವೂ ಇಲ್ಲದಿದ್ದರೆ ಅಂತಹವನ ಗತಿಯೇನು? ಪ್ರೀತಿ ಒಳ್ಳೆಯ ಲಕ್ಷಣ. ಹಾಗೆಂದು ಅದು ವ್ಯಾಮೋಹವಾದರೆ ಕಷ್ಟವೇ. ಆಸೆ ಒಳ್ಳೆಯ ಲಕ್ಷಣ. ಆದರೆ ಅಸೆ ಅತಿಯಾದರೆ ಗತಿಗೇಡು. ಅದೇ ರೀತಿ ಬಹುತೇಕ ಪುರಾಣ - ಮಹಾಕಾವ್ಯಗಳಲ್ಲಿ ಪ್ರತಿಯೊಂದು ಪಾತ್ರದ ಕತೆ ಹೇಳಬೇಕಿದ್ದಾಗಲೂ ಒಂದೊಂದು ಗುಣ ಎದುರಿಸಿದ ತಾಕಲಾಟಗಳನ್ನು, ವಿಪರ್ಯಾಸಗಳನ್ನು, ಹಾಗೆಯೇ ಹಿತಮಿತವಾಗಿದ್ದಾಗ ಗುಣಗಳು ವ್ಯಕ್ತಿಗೆ ಪ್ರಾಪ್ತಗೊಳಿ

ನರಹರಿ ಪರ್ವತಕ್ಕೆ ಚಾರಣ

Image
ನಿನ್ನೆ ನರಹರಿ ಪರ್ವತಕ್ಕೆ ನಮ್ಮ ಪ್ರಯಾಣ...ಈ ಚಾರಣದ ಚಿತ್ರದಲ್ಲಿ ಮಿತ್ರರಾದ ಜಯರಾಮ ನಾವಡ ನಿಟಿಲಾಪುರ, ನವೀನ್ ಜಿ. , ಗಣೇಶ್ ಕೆ. ಆರ್. ಹಾಗೆಯೇ ನಾನೂ ಇದ್ದೇನೆ.

ಬಾನಂಗಳದಲ್ಲಿ ಹಾರಿದ ಗಾಳಿಪಟಗಳು

Image
ಜಯರಾಮ ನಾವಡ ಗಾಳಿಪಟ ಹಾರಿಸುವುದರಲ್ಲಿ ನಿಸ್ಸೀಮರು. ಎಂತಹ ಪುಟವನ್ನಾದರೂ ಪಟ ಮಾಡಿ, ಪಟಪಟನೆ ಹಾರಿಸುವುದು ಅವರ ಪ್ರವೃತ್ತಿಗಳಲ್ಲೊಂ ದು.  ನೆಟ್ಲ ಪರಿಸರಕ್ಕೆ ತೆರಳಿ, ಕಲಾವಿದ  ನವೀನ್ ಅವರ ಸಹಕಾರದೊಂದಿಗೆ ಗಾಳಿಪಟ ರಚಿಸಿ, ನಿನ್ನೆ ಸಂಜೆ ನಾವಡರ ಜೊತೆ ನಾನು, ಮಿತ್ರರಾದ ಗಣೇಶ್ ಕೆ.ಆರ್., ಮಹೇಶ್ ಹಾಗೂ ಪುಟಾಣಿ ಮಿತ್ರರು ಉತ್ಸಾಹದಿಂದ ಗಾಳಿಪಟ ಹಾರಿಸಿದ ಸಂದರ್ಭ....

ಉಸಿರು

Image
ಹೋಗುವುದು ಹೋಗಲಿ ಬಿಡಿ; ಉಳಿಯುವುದು ಮಾತ್ರ ಉಳಿಯಲಿ - ಮನುಷ್ಯ ಮನುಷ್ಯರಿಗಷ್ಟೆ ಅರ್ಥವಾಗುತ್ತಾನೆ... ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ನಾವು ರೇಡಿಯೋದಲ್ಲಿ ಹಾಡು ಕೇಳಿ ಗುರುತಿಸುತ್ತೇವೆ ಟಿವಿಯಲ್ಲಿ ಸಿನಿಮಾ, ಕಾರ್ಟೂನ್ ಪ್ರಸಾರಿಸುತ್ತೇವೆ ಇಂಟರ್‌ನೆಟ್ಟಿಗೆ ಉಚಿತ ಡಾಟಾ ಕೊಟ್ಟಿರುತ್ತೇವೆ ಅರ್ಥವಾಗಲಿ ಅಂತ ಥರಥರದ ಮೊಬೈಲು, ಕಂಪ್ಯೂಟರ್ ಬಳಸುತ್ತೇವೆ ವಸ್ತು ಹಾಗೂ ಮನುಷ್ಯರನ್ನು ಉಪಯೋಗಿಸುತ್ತೇವೆ ಕತೆ, ಕವಿತೆ, ಚಿತ್ತಾರ, ನೃತ್ಯ, ತಾಳ, ಲಯ, ಲಾಸ್ಯ ಕಲಿಯತೊಡಗುತ್ತೇವೆ ಹಾಗೆಯೇ... ನಮಗೆ ಎಲ್ಲರೂ ಅರ್ಥವಾಗತೊಡಗುತ್ತಾರೆ ಚೂರುಚೂರು. ಅರ್ಥವಾಗುತ್ತೇವೆ ನಾವು ನಮಗೆ ತನ್ಮೂಲಕ - ಒಂದು ಅಶಾಬ್ದಿಕ ಪ್ರಕ್ರಿಯೆಯಲ್ಲೂ ಕೂಡ ಸಮಾಜಕ್ಕಾಗಿ ಬದುಕುವ ಮನುಷ್ಯನಿಗೆ ಸಮಾಜ ಅರ್ಥವಾಗುತ್ತದೆ ಮನುಷ್ಯ ಕೂಡ ಅರ್ಥವಾಗುತ್ತಾನೆ ತಕ್ಕಷ್ಟು - ಮುಖ್ಯವಾಗುತ್ತಾನೆ ಮತ್ತಷ್ಟು. ಬರಬರುತ್ತಾ, ಇಪ್ಪತ್ತೇಳಲ್ಲ ಇಪ್ಪತ್ತೆಂಟನ್ನೇ ಏಕೆ ಆಡಬೇಕು ಅರ್ಥವಾಗುತ್ತದೆ- ಹೊರಬರಬೇಕು ನಾವು ಭ್ರಾಂತಿ - ಭಂಡತನದಿಂದ, ಬಡಿವಾರದಿಂದ, ಅರ್ಥವಾಗುವುದಕ್ಕೆ. ಚೆನ್ನಾಗಿ ಅರ್ಥೈಸಿಕೊಳ್ಳುತ್ತ ಸಜ್ಜನನಾಗಿ ಬದುಕುವುದಕ್ಕೆ ಜ್ಞಾನ ಅರಿವಾಗಬೇಕು; ಪ್ರೀತಿ ಪಡೆದಾತ ಮಾತ್ರ ಪ್ರೀತಿ ಕೊಡಬಲ್ಲನಂತೆ - ಕಾಯಕ ಕೀರ್ತಿಯಾಗಬೇಕು ಎಲ್ಲರೂ ಬಾಳಬೇಕು. ✍️ ಶಿವಕುಮಾರ ಸಾಯ 'ಅಭಿಜಿತ್'

ಹೀಗೊಂದು ಹಬ್ಬ ಮತ್ತು ಕುಶಲೋಪರಿ

Image
ವಿಜಯದಶಮಿಯ ದಿನ ಬೆಳಿಗ್ಗೆ ನನ್ನ ಕಾಲೇಜು ಸಹಪಾಠಿಯೂ, ಸ್ನೇಹಿತರೂ, ಅನಿಮೇಟರ್ ಕೂಡ ಆಗಿರುವ ಶ್ರೀಯುತ ಜಯರಾಮ ನಾವಡ ಅವರು ಕರೆ ಮಾಡಿ ತಾನು ಈ ದಿವಸ ನಮ್ಮಿಬ್ಬರಿಗೂ ಮಿತ್ರರಾದ ಶ್ರೀಯುತ ಗಣೇಶ್ ಕೆ. ಆರ್. ಅವರ ಜೊತೆ ನಮ್ಮ ಮನೆಗೆ ಆಗಮಿಸುತ್ತಿರುವುದಾಗಿ ಹೇಳಿದರು. ಬಹಳ ಸಂತೋಷವಾಯಿತು. ಸುಮಾರು ಹನ್ನೊಂದು ಮೂವತ್ತಕ್ಕೆ ಮನೆಯಲ್ಲಿ ಹಬ್ಬದ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಪಕ್ಕದ ಹೊಳೆಯಲ್ಲಿ - ಪ್ರಕೃತಿಯ ಮಡಿಲಲ್ಲಿ ನಮ್ಮ ಕಾರ್ಯಕಲಾಪಗಳು ನಡೆಯುತ್ತಿದ್ದವು. ಹೆಚ್ಚಾಗಿ ಸಾಹಿತ್ಯ, ಕಲೆ,  ಮನೋವ್ಯಾಪಾರಗಳ ಬಗ್ಗೆ ನಮ್ಮ ಗೋಷ್ಠಿ ಮತ್ತು ಗೊತ್ತುವಳಿಗಳು ಇರುತ್ತವೆ. ಆದರೆ ಈ ಸಲ ಮುಖ್ಯವಾಗಿ ಒಂದಷ್ಟು ನಿರಾಳತೆ, ಸಂತೋಷ ಅಷ್ಟೇ. ಹಬ್ಬದ ಊಟ, ಆಟ, ಕೂಟ, ಕುಶಲೋಪರಿಗಳು ಇವು ಖುಷಿ ಕೊಡುವ ಸಂಗತಿಗಳು. ✍️ ಶಿವಕುಮಾರ ಸಾಯ 'ಅಭಿಜಿತ್' ಅಕ್ಟೋಬರ್ 8ರಂದು ಮಿತ್ರರಾದ ಸನ್ಮಾನ್ಯ ಶ್ರೀಯುತ ಜಯರಾಮ ನಾವಡ ಹಾಗೂ ಸನ್ಮಾನ್ಯ ಶ್ರೀಯುತ ಗಣೇಶ್ ಕೆ. ಆರ್. ಅವರ ಆಗಮನದೊಂದಿಗೆ ನಮ್ಮ ಮನೆಯಲ್ಲಿ ವಿಜಯದಶಮಿಯ ಸಂಭ್ರಮ ಚಿತ್ರ ಕೃಪೆ: ಅಮೃತವಾಹಿನಿ