Posts

Showing posts from August, 2021

ಹಿಂದೂ ಧರ್ಮಪ್ರಜ್ಞೆ ಮತ್ತು ಋಷಿವಾಕ್ಯಗಳ ಪ್ರಸ್ತುತತೆ

Image
ಬಹಳ ದಿನಗಳಿಂದ ಉಪನಿಷತ್ತುಗಳ ಬಗ್ಗೆ ಏನಾದರೂ ಚೂರು ಬರೆಯಬೇಕೆಂದು, ಮಾತಾಡಬೇಕೆಂದು ಬಯಸಿದ್ದೆ. ಈಗ ಅದನ್ನು ಬರೆಯುತ್ತಿದ್ದೇನೆ ಹಾಗೂ ಮಾತಾಡುತ್ತಿದ್ದೇನೆ. ಧರ್ಮದ ಆಚರಣೆಗಾಗಿ ಇರುವ ಶಾಸ್ತ್ರಗಳು ಒಂದು ಬಗೆಯಾದರೆ, ಅರಿವಿಗೆ ಸಂಬಂಧಿಸಿದ ಧರ್ಮಗ್ರಂಥಗಳು ಮತ್ತೊಂದು ಬಗೆ. ಭಾರತೀಯ ಹಿಂದೂ ಧರ್ಮದ ಅತೀ ಮುಖ್ಯ ಭಾಗವಾಗಿರುವ ಉಪನಿಷತ್ತುಗಳು ಜಗತ್ತಿನ ಉತ್ಕೃಷ್ಟ ತಾತ್ತ್ವಿಕ ಧರ್ಮಗ್ರಂಥಗಳಾಗಿವೆ. ಹಿಂದೂ ಧರ್ಮಗ್ರಂಥಗಳಲ್ಲಿ ವೇದಗಳು, ಉಪನಿಷತ್ತುಗಳು, ಪುರಾಣಗಳು ಹಾಗೂ ಮಹಾಕಾವ್ಯಗಳು ಸೇರಿವೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವವೇದ ಎಂಬ ನಾಲ್ಕು ವೇದಗಳಿವೆ. ವೇದಗಳ ಕೊನೆಯ ಭಾಗವನ್ನು ಉಪನಿಷತ್ತುಗಳು ಅಥವಾ 'ವೇದಾಂತ' ಎಂದು ಕರೆಯುವರು. ಐತರೇಯ, ಬೃಹದಾರಣ್ಯಕ, ಈಶಾವಾಸ್ಯ, ತೈತ್ತಿರೀಯ, ಛಾಂದೋಗ್ಯ, ಕೇನ, ಮುಂಡಕ, ಮಾಂಡೂಕ್ಯ, ಕಠ, ಪ್ರಶ್ನೆ, ಶ್ವೇತಾಶ್ವತರ - ಇವು ಹನ್ನೊಂದು ಪ್ರಮುಖ ಉಪನಿಷತ್ತುಗಳು. ಒಟ್ಟು 18 ಪುರಾಣಗಳು ಹಿಂದೂ ಧರ್ಮದಲ್ಲಿವೆ. ಅವುಗಳೆಂದರೆ ವಿಷ್ಣುಪುರಾಣ, ನಾರದ ಪುರಾಣ, ಶ್ರೀಮದ್ ಭಾಗವತ ಪುರಾಣ, ಗರುಡ ಪುರಾಣ, ಪದ್ಮಪುರಾಣ, ವರಾಹ ಪುರಾಣ, ಬ್ರಹ್ಮ ಪುರಾಣ, ಬ್ರಹ್ಮಾನಂದ ಪುರಾಣ, ಬ್ರಹ್ಮ ವೈವರ್ತ ಪುರಾಣ, ಮಾರ್ಕಂಡೇಯ ಪುರಾಣ, ಭವಿಷ್ಯ ಪುರಾಣ, ವಾಮನ ಪುರಾಣ, ಮತ್ಸ್ಯ ಪುರಾಣ, ಕೂರ್ಮ ಪುರಾಣ, ಲಿಂಗ ಪುರಾಣ, ಶಿವ ಪುರಾಣ, ಸ್ಕಂದ ಪುರಾಣ ಮತ್ತು ಅಗ್ನಿ ಪುರಾಣ. ರಾಮಾಯಣ ಮತ್ತು ಮಹಾಭಾರತ ಎ