Posts

Showing posts from December, 2020

ನಾವು ನಮ್ಮ ಸುತ್ತಲೂ ನಮ್ಮದೇ ಭೂತಕಾಲ ಮತ್ತು ಭವಿಷ್ಯತ್ಕಾಲವನ್ನು ನೋಡುತ್ತೇವೆ

Image
ನಮಗೆ ಈ ಜಗತ್ತನ್ನು ಅನುಭವಿಸುವುದಕ್ಕೆ ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಐದು ಜ್ಞಾನೇಂದ್ರಿಯಗಳು ಹಾಗೂ ಕ್ರಿಯೆಗಳಿಗಾಗಿ ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ ಎಂಬ ಐದು ಕರ್ಮೇಂದ್ರಿಯಗಳು ಇರುವಂಥದ್ದು. ನಮ್ಮ ದೇಹ ಒಂದು ಅದ್ವಿತೀಯ ಸಾಧನವಾಗಿದೆ. ಈ ಲೇಖನದಲ್ಲಿ ನಾವು ನಮ್ಮ ಬಗ್ಗೆ ಸಮಗ್ರವಾಗಿ ನೋಡುವ ಪ್ರಯತ್ನ ಮಾಡೋಣ. ನಮ್ಮ ದೇಹವೆಂಬ ಪಿಂಡಾಂಡವು ಬ್ರಹ್ಮಾಂಡದ ಮಾದರಿಯಲ್ಲಿದೆ. ನಾವು ಎಲ್ಲಾ ಇಂದ್ರಿಯಗಳನ್ನು ಬಳಸಿ ಪ್ರಪಂಚವನ್ನು ಅನುಭವಿಸುವಾಗಲೂ ಅದು ನಮ್ಮದೇ ಅನುಭವಪ್ರಪಂಚವಾಗಿರುತ್ತದೆ. ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯ ಅಂದರೆ ಆಸ್ಟ್ರೋನಮಿ ಆಧಾರದಲ್ಲಿ ನೋಡುವಾಗ ಎಲ್ಲಾ ನಮ್ಮ ಸುತ್ತಲ ಬಗೆಬಗೆಯ ವಸ್ತುಗಳು ಹಾಗೂ ಜೀವಿಗಳು ಸಮಸ್ತವೂ ಒಂದೇ ಮೂಲದ ನೂರೆಂಟು ಮುಖಗಳು ಎಂದು ಕಂಡುಬರುವುದಾಗಿದೆ. ವಿಕಾಸವಾದವು ಜೀವಜಗತ್ತು ಕ್ರಿಮಿಗಳ ಹಂತದಿಂದ ಈ ಭೂಮಿಯಲ್ಲಿ ಜೀವ ವಿಕಾಸವಾಗುತ್ತಾ ಬಂತು ಎನ್ನುತ್ತದೆ. ಭೌತಶಾಸ್ತ್ರವು ಸಣ್ಣ ಬೋಸಾನ್ ಕಣ ಸ್ಫೋಟಿಸಿ ಇಂದಿನ ವಿಶ್ವವಾಯಿತೆಂದು ಹೇಳುತ್ತದೆ. ಅವೆರಡನ್ನು ಬೇರೆಬೇರೆಯಾಗಿ ನೋಡದೆ ಒಟ್ಟಾಗಿ ನೋಡುವಾಗ ಕಣ ಸಿದ್ಧಾಂತದಲ್ಲಿ ಬೆಳಕಿನ ಕಣದ ಬಗ್ಗೆ ಹೇಳಿದಂತೆಯೇ ಈ ವಿಶ್ವವೆಂದರೆ ಚೈತನ್ಯದ ಕಣವು ಕಣ ಮತ್ತು ತರಂಗವೂ ಆಗಿರುತ್ತಾ ಕಂಪಿಸುತ್ತಲೇ ಇರುವಂಥದ್ದಾಗಿದೆ. ತನ್ನ ಎಲ್ಲಾ ಆಯಾಮಗಳಿಂದ ಅನೂಹ್ಯ ಬಗೆಯಲ್ಲಿ ಇದು ಕಂಪಿಸುತ್ತಲೇ ಇದೆ. ಆ ಆಂದೋಲನದಲ್ಲಿ ಚೈತನ್ಯವ

ನಾವು ಚೆನ್ನಾಗಿದ್ದೇವೆ

Image
ನೀವೊಂದು ಮರದ ಬುಡವನ್ನು ಅರ್ಧಂಬರ್ಧ ನೋಡುತ್ತೀರಿ ಹಾಗೂ ಅದು ಯಾವ ಹೂವು ಯಾವ ಹಣ್ಣು ಬಿಡುವುದೆಂದು ಅರ್ಧಂಬರ್ಧ ಅರ್ಥ ಮಾಡಿಕೊಳ್ಳುವಿರಿ ಎಂದಿರಲಿ. ನೀವೀಗ ಮರದ ಬುಡವನ್ನು ಮಾತ್ರ ನೋಡುತ್ತಿದ್ದೀರಿ -  ಅದೂ ಭಾಗಶಃ....  ಆಗಲೂ -  ನಿಮಗೆ ಗೊತ್ತಿಲ್ಲದ ನೂರೆಂಟು ಬೇರುಗಳು ಆ ಮರಕ್ಕಿರುತ್ತವೆ ಮತ್ತು ನೀವದನ್ನು ಕಾಣಲಾರಿರಿ ಆ ಮರದ ಒಗಟನ್ನು ನೀವು ಎಳ್ಳಷ್ಟೂ  ಭೇದಿಸಲಾರಿರಿ ಮರಗಳನ್ನು ಕತ್ತರಿಸುವುದು ಸುಲಭ ಬೇರುಗಳ ವಿಷಯ ಕಷ್ಟ ನೀವು ಕತ್ತರಿಸಿದರೂ ಬೇರುಗಳು ಆಕಾಶದಷ್ಟು ಅನಂತಕ್ಕೆ ಇರುತ್ತವೆ ಮತ್ತು ಅವು ನಿಮ್ಮ ದೃಷ್ಟಿಯೊಳಗೇ ಬೇರು ಬಿಟ್ಟಿರುವವು. ಮರಕ್ಕೆ ಬ್ರಹ್ಮಾಂಡದ ಬಹುತ್ವ ನಾವು ನಾವೆಂದು ಬಹುವಚನ ಮಾತಾಡುವ ತವಕ ಅದೇನು ಇಂದ್ರಜಾಲವೋ ನಾನರಿಯೆ ಸದಾ ನಾವೆಲ್ಲರೂ ಚೆನ್ನಾಗಿದ್ದೇವೆ... ✍️ ಶಿವಕುಮಾರ ಸಾಯ 'ಅಭಿಜಿತ್'

ಭಾಗ್ಯೋದಯ ಈ ಸೂರ್ಯೋದಯ

Image
ಭಾಗ್ಯೋದಯ ಈ ಸೂರ್ಯೋದಯ ಅಹಾ! ರಸಮಯ, ಹೃದಯ ತನ್ಮಯ ಕಪ್ಪು ರಾತ್ರಿ ಕಳೆದು, ಬೆಳಕು ಮೂಡಿ ಹರಿದು, ಬೆಟ್ಟ ಘಟ್ಟ ಏರಿ, ರವಿಯು ಬಂದ ಜಾರಿ ಬಾನ ಅರಳು ಬಣ್ಣ, ಕಾಂತಿ ತೆರೆದ ಕಣ್ಣ, ನೋಡಿ ಸುಖದ ಮೋಡಿ, ಮುದದಿ ರಾಗ ಹಾಡಿ ಮಹತಿ ಎಂಬ ಮೇಲ್ಮೆ, ತಾಳಿ ಸ್ಥಿರದ ಜಾಣ್ಮೆ, ಹಿಗ್ಗಿನಿಂದ ಬೀಗಿ, ಜಗ್ಗದೇ ನಿಂತು ತೂಗಿ ಧವಳತೆಯ ಹೊಳಪು ಮಿನುಗಿ, ಚಿಂತನೆಯ ಲಹರಿ ಜಿನುಗಿ, ಶಕ್ತಿ ಸ್ಥಾಯಿಯಾಗಿ, ನಿತ್ಯ ವಿಜಯ ಮೊಳಗಿ ಭಾಗ್ಯೋದಯ ಈ ಸೂರ್ಯೋದಯ ಅಹಾ! ರಸಮಯ, ಹೃದಯ ತನ್ಮಯ ✍️ ಶಿವಕುಮಾರ ಸಾಯ 'ಅಭಿಜಿತ್'

Subscribe to Shivakumar Saya YouTube channel | Shivakumar Saya ಯೂಟ್ಯೂಬ್ ಚಾನೆಲ್‌ ಸಬ್‌ಸ್ಕ್ರೈಬ್ ಮಾಡಿ, ವೀಕ್ಷಿಸಿ... - ಶಿವಕುಮಾರ ಸಾಯ

Image
ಎಲ್ಲ ಆತ್ಮೀಯರಿಗೂ ನಮಸ್ಕಾರ... ನೀವು ನನ್ನ ಯೂಟ್ಯೂಬ್ ಚಾನೆಲ್ ವೀಕ್ಷಿಸಿಲ್ಲವಾದರೆ ದಯವಿಟ್ಟು ವೀಕ್ಷಿಸಿ.. ಸಬ್‌ಸ್ಕ್ರೈಬ್ ಮಾಡಲೂಬಹುದು. ವಿಡಿಯೋಗಳು ಖಂಡಿತವಾಗಿಯೂ ನನ್ನ ಬರಹಗಳನ್ನು ಇಷ್ಟಪಡುವವರಿಗಂತೂ ಇಷ್ಟವಾಗಿಯೇ ಆಗುತ್ತವೆ. ಚಾನೆಲ್ ಲಿಂಕ್ ಕಾಪಿ ಮಾಡಿಕೊಂಡು ಕ್ಲಿಕ್ ಮಾಡಿ https://youtube.com/c/ShivakumarSaya ಅಥವಾ ಯೂಟ್ಯೂಬ್‌ನಲ್ಲಿ Shivakumar Saya ಎಂದು ಹುಡುಕುವ ಮೂಲಕ ನೀವು ನನ್ನ ವಿಡಿಯೋಗಳನ್ನು ವೀಕ್ಷಿಸಬಹುದು. ಅಂತೂ ನನ್ನ ಬ್ಲಾಗ್ ವೀಕ್ಷಿಸುವ, ನನ್ನ ಚಾನೆಲ್ ನೋಡುವ, ಪ್ರತಿಕ್ರಿಯಿಸುವ ಎಲ್ಲಾ ಪ್ರೀತಿಪಾತ್ರರಿಗೂ ಶಬ್ದದಲ್ಲಿ ಮತ್ತು ಸ್ಮರಣೆಯಲ್ಲಿ ಅನಂತಾನಂತ ಕೃತಜ್ಞತೆಗಳು. ✍️ ಶಿವಕುಮಾರ ಸಾಯ 'ಅಭಿಜಿತ್ '

ಸಮತೋಲನ

Image
ಸಮತೋಲನ 'ಸಮತೋಲನ' ಈ ಪದಕ್ಕೆ ಸಮಚಿತ್ತ, ಸಮತೆ, ತೂಕಬದ್ಧತೆ ಎಂಬ ಶಬ್ದಾರ್ಥಗಳಿವೆ. ಈ ಪದವನ್ನು ನಾವು ಹಲವು ಸಂದರ್ಭಗಳಲ್ಲಿ ಬಳಸುತ್ತೇವೆ. ಆರೋಗ್ಯದ ವಿಚಾರದಲ್ಲಿ ಸಮತೋಲನ ಪದಕ್ಕೆ ಬಹಳ ಮಹತ್ವವುಂಟು. ಭಾರತೀಯ ವೈದ್ಯಶಾಸ್ತ್ರ ಮತ್ತು ಭಾರತೀಯ ತತ್ತ್ವಶಾಸ್ತ್ರದ ಆಧಾರದ ಮೇಲೆ ಈ ಸಮತೋಲನ ಎಂಬುದರ ಬಗ್ಗೆ ಪ್ರಸ್ತುತ ವಿಚಾರ ಮಾಡೋಣ. ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಬಗೆಯ ಜೀವಂತ ಮತ್ತು ನಿರ್ಜೀವವಾಗಿರುವ ಎಲ್ಲಾ ಚರ ಮತ್ತು ಅಚರ ವಸ್ತುಗಳನ್ನೂ ಒಮ್ಮೆ ಗಮನಿಸೋಣ. ಅವು ಆ ಬಗೆಯಲ್ಲಿ ಅಸ್ತಿತ್ವದಲ್ಲಿರುವುದಕ್ಕೆ ಆ ವಸ್ತು ಅಥವಾ ಜೀವಿಯ ಒಳಗಿನ ವಿಶೇಷ ಸಮತೋಲನವೇ ಕಾರಣ. ಈ ಸಮತೋಲನ ವಸ್ತುವಿನಿಂದ ವಸ್ತುವಿಗೆ, ಜೀವಿಯಿಂದ ಜೀವಿಗೆ, ಒಬ್ಬನಿಂದ ಮತ್ತೊಬ್ಬನಿಗೆ ಭಿನ್ನ ಭಿನ್ನವಾಗಿರುತ್ತದೆ. ಇದು ಮಣ್ಣು, ನೀರು, ಅಗ್ನಿ, ಆಕಾಶ, ವಾಯು ಈ ಪಂಚಮಹಾಭೂತಗಳ ಸಮತೋಲನವಾಗಿರುತ್ತದೆ. ಅಸ್ತಿತ್ವದಲ್ಲಿ ಪ್ರತಿಯೊಂದು ವಸ್ತುವಿನ ಇರುವಿಕೆಗೂ ಈ ಪಂಚಮಹಾಭೂತಗಳ ನಿಷ್ಪತ್ತಿ ಕಾರಣ. ನಮ್ಮ ಎಲ್ಲಾ ಮೂಲವಸ್ತುಗಳು, ಪದಾರ್ಥಗಳು ಸರ್ವವೂ ಪಂಚಮಹಾಭೂತಗಳ ವೈವಿಧ್ಯಮಯ ಸಂಯೋಜನೆ, ವರ್ತನೆ, ಕಾರ್ಯ ಕಾರಣ ಪರಿಣಾಮ ತತ್ತ್ವದ ಮೇಲೆಯೇ ಇರುತ್ತವೆ. ಎಲ್ಲಾ ವಸ್ತುಗಳಲ್ಲಿ ಇವುಗಳ ನಿಷ್ಪತ್ತಿಯ ವ್ಯತ್ಯಾಸದಿಂದ ಗುಣಗಳಲ್ಲಿ ವ್ಯತ್ಯಾಸ ಇರುತ್ತದೆ. ನಿಷ್ಪತ್ತಿಯು ತಾತ್ಪೂರ್ತಿಕವಾಗಿ ಬದಲಾದರೆ ವಸ್ತುವು ತನ್ನ ಸ್ಥಿತಿಯನ್ನು ಬದಲಾಯಿಸಿ ಬೇರೆಯದೇ