Posts

Showing posts from September, 2019

ಅನುಭವ

Image
ನಗುನಗುತ ಬದುಕಿ ಬಾಳು/ ಓ ಮನುಜ ಹಸನಾಗಿ ಹರುಷ ತಾಳು// ಗಾಢನಿದಿರೆಯ ಸೀಳಿ ಸೋಜಿಗವು ಸೆಳೆಯುತಿದೆ ಮೂಢಮನ ಸುಮ್ಮನಾಗು/ ಖಾಲಿಹೃದಯವಿದಲ್ಲ; ವಾಲಗದ ಶಬ್ದವಿದೆ- ಖಾಸಗಿಯ ಕನಸ ಕಾಣು/ ಹೊಳೆಹೊಳೆವ ಖಾಸಗಿಯ ಕನಸ ಕಾಣು// ಅನ್ಯವೆಂಬುದು ಇಲ್ಲ; ಧನ್ಯವಿರು ಜೀವಿತಕೆ ಮಾನವನೆ ಮಾನ್ಯನಾಗು/ ನಂಬಿಕೆಯ ನೆಲೆಯಿರಲಿ, ನಲಿವು ಚಿರವಾಗಿರಲಿ ಮನವೇ ವಿಶಾಲವಾಗು/ ಬೆಳೆಬೆಳೆದು ಮನವೇ ವಿಶಾಲವಾಗು// ಹಗಲು ಇದೆ, ರಾತ್ರಿ ಇದೆ; ಮುಗಿಲು-ಮಳೆ-ಋತುವು ಇದೆ ಸೊಗಸಾಗಿ ಜಗವ ನೋಡು/ ಬೆಚ್ಚನೆಯ ಹಾರೈಕೆ, ಇಚ್ಛೆಗಳ ಪೂರೈಕೆ ಅನುಭವಿಸಿ ಪಕ್ವವಾಗು/ ನಳನಳಿಸಿ ಅನುಭವಿಸಿ ಪಕ್ವವಾಗು// ✍️ಶಿವಕುಮಾರ ಸಾಯ 'ಅಭಿಜಿತ್'

ನಿಲುವು

Image
ಗೆಲುವು ನಿನ್ನದಾಗಲು ಒಲವಿರಬೇಕು ಬಲವಿರಬೇಕು ಛಲವೂ ಇರಬೇಕು. ನಿಯಮ, ನಿಷ್ಪತ್ತಿ ಬೇಕು ಬದುಕಿ ಬಾಳಲು; ಕಿವಿಮಾತು ಹೇಳಲು, ಆಶಯವ ತಾಳಲು. ವರ್ಣರಂಜಿತ ಪಾತ್ರ - ಸೂತ್ರಗಳು, ಬಗೆಬಗೆಯ ಕಲ್ಪನೆಗಳು, ಹಲವು ಆಯಾಮಗಳು, ಕೈಚಳಕ. ಸಲಹುವ ಧರ್ಮ ಸ್ವತಂತ್ರ; ಕರ್ಮಭೂಮಿಯೇ ಸ್ವರ್ಗ- ದಯೆಯಿಲ್ಲದ ಧರ್ಮವಿಲ್ಲ ಈ ನಡುವೆ ನಿರಂತರ- ಅತ್ತಲೂ ಗೆಲುವು ಇತ್ತಲೂ ಗೆಲುವು ಸುತ್ತಲೂ ಗೆಲುವು ನೀ ಹೊತ್ತ ನಿಲುವು! ✍️ಶಿವಕುಮಾರ ಸಾಯ 'ಅಭಿಜಿತ್'

ಸ್ನೇಹ ಸಂಜೀವಿನಿ

Image
ಸ್ನೇಹವು ಸಂಜೀವಿನಿಯಂತೆ. ಒಳ್ಳೆಯ ಸ್ನೇಹಿತರೆನಿಸಿಕೊಳ್ಳಬೇಕಾದರೆ ನಾವು ಈ 13 ಸೂತ್ರಗಳನ್ನು ಪಾಲಿಸಬೇಕು ಎನ್ನಲಾಗುತ್ತದೆ. ಆ ಬದ್ಧತೆಗಳತ್ತ ಇಲ್ಲಿ ಒಂದು ಗಮನ. 1. ವಿಶ್ವಾಸಾರ್ಹನಾಗಿರುತ್ತೇನೆ. 2. ಇತರರೊಂದಿಗೆ ಪ್ರಾಮಾಣಿಕನಾಗಿರುತ್ತೇನೆ. 3. ಸಾಮಾನ್ಯವಾಗಿ ನಂಬಿಕಸ್ಥನಾಗಿರುತ್ತೇನೆ. 4. ಕಾಳಜಿ ತೋರಬೇಕಾದವರಲ್ಲಿ ನಿಷ್ಠನಾಗಿರುತ್ತೇನೆ. 5. ಸುಲಭವಾಗಿ ಮತ್ತೊಬ್ಬರಲ್ಲಿ ನಂಬಿಕೆಯನ್ನು ತಳೆಯುತ್ತೇನೆ. 6. ಅನುಭೂತಿಯನ್ನು ಅನುಭವಿಸುತ್ತೇನೆ ಮತ್ತು ವ್ಯಕ್ತಪಡಿಸುತ್ತೇನೆ. 7. ತೀರ್ಮಾನಗಾರನಾಗಹೊರಡುವುದಿಲ್ಲ. (Non - judgemental) 8. ಒಳ್ಳೆಯ ಕೇಳುಗನಾಗಿರುತ್ತೇನೆ. 9. ಬೇರೆಯವರ ಸುಖದ ಸಮಯಗಳಲ್ಲಿ ಬೆಂಬಲಿಗನಾಗಿರುತ್ತೇನೆ. 10. ಬೇರೆಯವರ ದುಃಖದ ಸಮಯಗಳಲ್ಲಿ ಬೆಂಬಲಿಗನಾಗಿರುತ್ತೇನೆ. 11. ಆತ್ಮವಿಶ್ವಾಸಿಯಾಗಿರುತ್ತೇನೆ. 12. ಸಾಮಾನ್ಯವಾಗಿ ಜೀವನದಲ್ಲಿ ಹಾಸ್ಯವನ್ನು ಕಾಣಬಲ್ಲವನಾಗಿರುತ್ತೇನೆ. 13. ಸುತ್ತಲೂ ವಿನೋದ ಮತ್ತು ತಮಾಷೆಯನ್ನು ಕೊಡುತ್ತೇನೆ. ✍️ ಶಿವಕುಮಾರ ಸಾಯ 'ಅಭಿಜಿತ್'