Posts

Showing posts from April, 2019

🔶🔷 ನನ್ನ ಜೀವವಿಕಾಸ 🔸🔹 ಜೀವನ ಕಥನ

Image
ಯಾವುದೇ ಹೆಚ್ಚುಗಾರಿಕೆಯಿಲ್ಲದೆ ನನ್ನ ಬದುಕಿನ ಕೆಲವಾರು ಸಂಗತಿಗಳನ್ನು ದಾಖಲಿಸುತ್ತಿರುವುದು ಅಗತ್ಯ ಎಂದು ಹಲವಾರು ಬಾರಿ ಮನಗಂಡಿದ್ದೇನೆ. ನನ್ನ ಹಲವಾರು ಅನುಭವಗಳು ಮತ್ತು ಪ್ರಯೋಗಗಳು 'ಸವಿನೆನಪುಗಳನ್ನು ಪುಷ್ಟೀಕರಿಸಬೇಕು' ಎಂಬ ತೀರ್ಪು ಪ್ರಕಟಿಸಿಬಿಟ್ಟ ಮೇಲೆ ನಾನು ರೀವೈರಿಂಗ್ ಮಾಡಿಕೊಳ್ಳಬೇಕು ಎಂಬ ಇಚ್ಛೆಯಿಂದ, ಹಾಗೆಯೇ ಪದಗಳು ಹಾಗೂ ವಸ್ತುಗಳ ಬಗೆಗೂ ಎಚ್ಚರಿಕೆಯಿಟ್ಟು ಬರೆಯುವ ವರ್ತಮಾನದ ಸಾಹಸ ನನ್ನದಾಗುತ್ತಿದೆ. ಅಮ್ಮ ಹೇಳಿದಂತೆ ನಾನು ಜನಿಸಿದ್ದು 11, ನವೆಂಬರ್ 1983ರಂದು. ಅಂದು ಶುಕ್ರವಾರವಾಗಿತ್ತಂತೆ. ನಮ್ಮದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಬೆಳೆಯೂರು ಹವ್ಯಕ ಬ್ರಾಹ್ಮಣ ಕುಟುಂಬದ ಸಂಪ್ರದಾಯಸ್ಥ ಮನೆತನ. ನನ್ನ ತಾಯಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ 'ಸಾಯ' ಎಂಬಲ್ಲಿನ ಸಂಪ್ರದಾಯಸ್ಥ ಹವ್ಯಕರಾಗಿದ್ದು, ತಂದೆಯವರು ವಿವಾಹದ ಬಳಿಕ ಆ ಊರಿನ ಪಕ್ಕದಲ್ಲೇ ನೆಲೆಸಿದ್ದರಿಂದ ನಮಗೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಲಭಿಸಿತು. ಬೆಳೆಯೂರು ಮನೆತನ ಕಲೆ ಮತ್ತು ಸೃಜನಶೀಲತೆಗೆ ಹೆಸರಾದ ಮನೆತನ. ನಮ್ಮ ಅಜ್ಜ ಅಂದರೆ ತಂದೆಯ ತಂದೆ ಬೆಳೆಯೂರು ಪರಮಯ್ಯನವರು ಯಕ್ಷಗಾನದ  ಹವ್ಯಾಸಿಯೂ, ಪ್ರಸಿದ್ಧರೂ, ಕಾರಣಿಕರೂ, ಕಾಲಜ್ಞಾನಿಯೂ ಆಗಿದ್ದರೆಂದು ತಂದೆಯವರು ಹೇಳುತ್ತಾರೆ. ಆದರೆ ನಾನು ಜನಿಸುವ ವೇಳೆಗೆ ಅವರು ತೀರಿಕೊಂಡಿದ್ದರು. ನಾವು ಸಾಗರಕ್ಕೆ ಹೋದಾಗ ಅಜ್ಜಿ ಭಜನೆ ಮಾಡುತ್ತಿದ್ದುದನ್ನು ನೋ