Posts

Showing posts from January, 2020

ಕನ್ನಡದಲ್ಲಿ ಮಕ್ಕಳ ಸಾಹಿತ್ಯ

Image
ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ಒಂದು ಪ್ರತ್ಯೇಕ ವಿಭಾಗವಾಗಿ ಬೆಳೆದಿದೆ. 'ಮಕ್ಕಳ ಸಾಹಿತ್ಯ' ಎಂದರೆ ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ ಎನ್ನಲಾಗುತ್ತದೆ. ಆಧುನಿಕ ಶಿಕ್ಷಣ ಮತ್ತು ನವೋದಯ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ವಿಶೇಷವಾಗಿ ವಿಕಸಿತವಾಗಿದೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿಕತೆಗಳು, ಲಾಲಿಹಾಡುಗಳು, ಪ್ರಾಸಬದ್ಧವಾದ ಪದಗಳು, ಬೆಡಗುಗಳು, ಒಗಟುಗಳು ಅಲ್ಲಿ ಕಂಡುಬರುತ್ತವೆ. ರಾಜಕುಮಾರ - ರಾಜಕುಮಾರಿಯರ ಕಥೆ, ರಮ್ಯಾದ್ಭುತ ಕಥೆಗಳು, ಕಾಗಕ್ಕ ಗುಬ್ಬಕ್ಕನ ಕಥೆ, ಪಂಚತಂತ್ರದ ಕಥೆ - ಇಂಥವು ಮಕ್ಕಳ ಮನಸ್ಸನ್ನು ಸಂತೋಷಗೊಳಿಸುತ್ತಿದ್ದವು. ಆದರೂ ಆಧುನಿಕ ಕಾಲದಲ್ಲಿ ಮುದ್ರಣ ಕಲೆ ಜಾರಿಗೆ ಬಂದ ಮೇಲೆ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಪತ್ರಿಕಾ ಮಾಧ್ಯಮ ಇದಕ್ಕೆ ಪ್ರಚಾರ ನೀಡಿತು. ಹೀಗಾಗಿ ಇಂದು ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು, ಕಥೆಗಳು, ನಾಟಕ, ವಿಜ್ಞಾನ ಬರಹಗಳು, ವ್ಯಕ್ತಿಚಿತ್ರಗಳು ಪುಸ್ತಕಗಳಾಗಿ ಹೊರಬಂದು ಮಕ್ಕಳ ಮನೋಲೋಕವನ್ನು ಅರಳಿಸುತ್ತಿವೆ. ಕವಿ ಪಂಜೆ ಮಂಗೇಶ ರಾವ್ ಅವರನ್ನು ವಿಶೇಷವಾಗಿ 'ಶಿಶು ಸಾಹಿತ್ಯದ ಜನಕ' ಎಂದೇ ಕರೆಯಲಾಗುತ್ತದೆ. ಅವರ 'ಉದಯರಾಗ&

ಗುರುದರ್ಶನ

Image
ನಿನ್ನೊಳಗೆ ಎಲ್ಲವೂ ಇರುವುದರಿಂದಲೇ ದರ್ಶನವು ಸಾಧ್ಯ; ಗುರುದರ್ಶನವೆಂದರೆ ದೊಡ್ಡದರ ದರ್ಶನ. ಬ್ರಹ್ಮ ಕಲ್ಪ! ಅಗಣಿತ ಬ್ರಹ್ಮಾಂಡಗಳಲ್ಲಿ ಕಲ್ಪಿಸಿ ಕಾಲಿಡುತ್ತಾ ಅನಂತದಲ್ಲಿ ವ್ಯಾಪಿಸಿ, ದೇಶ ಕಾಲದಳತೆಯಲ್ಲಿ ದಿಕ್ಸೂಚಿಯಾಗಿ ಸಾಗಿ, ಎಲ್ಲವ ರೂಪಿಸಿ, ನಿರೂಪಿಸಿ, ಅಣು - ಪರಮಾಣುಗಳಲ್ಲಿ ಅಯಾನೇ ಆಗಿ, ಚರಾಚರಗಳಲ್ಲಿ ಚಿರಂತನವಾಗಿ ಚಲಿಸುತ್ತಿರುವೆ. ಬೆಳಕಿನ ಚೈತನ್ಯದ್ದು ನಡೆದದ್ದೇ ದಾರಿ, ಪರಿಣಾಮ ಚಿರಂಜೀವ. ಲೋಕ ಲೋಕಗಳ ಇಂಚಿಂಚಲ್ಲೂ ತೋಚಿ, ಅಖಂಡ ಆಯಾಮಗಳಲ್ಲಿ ಗೋಚರಿಸಿ, ಹಗಲಿರುಳೆನ್ನದೆ, ಹುಟ್ಟುಸಾವೆನ್ನದೆ, ನಿನ್ನಷ್ಟಕ್ಕೆ ನೀನಿದ್ದು ಮಾಡುತಿಹೆ ಸದ್ದು - ನಿನ್ನದೊಂದು ವಿಸ್ಮಯದ ಚಲನೆ, ಅಪರಿಮಿತ, ಅಸೀಮ, ನಿಸ್ಸೀಮ. ಪ್ರಕೃತಿಯಲ್ಲಿ ಪವಾಡ, ನೂರಾರು ವಿದ್ಯೆ, ಚಮತ್ಕಾರ; ನೂರೆಂಟರಲ್ಲಿ ನೀನು ಒಂದಾಗಿ, ಕಣ್ತೆರೆದದ್ದು ದೊಡ್ಡದೇ. ✍️ ಶಿವಕುಮಾರ ಸಾಯ 'ಅಭಿಜಿತ್'