Posts

Showing posts from January, 2022

ಕ್ವಾಂಟಮ್ ಭೌತಶಾಸ್ತ್ರ ಮತ್ತು ಭಾರತೀಯ ತತ್ತ್ವಶಾಸ್ತ್ರ

Image
ಭೌತಶಾಸ್ತ್ರದಲ್ಲಿ ಜಗತ್ತಿನ ಎಲ್ಲ ವಸ್ತುಗಳಲ್ಲಿರುವ ಕಣದ ಸ್ವರೂಪ, ಶಕ್ತಿಯ ಬಗ್ಗೆ ಅಧ್ಯಯನ ಮಾಡುವುದಕ್ಕೆ ಕ್ವಾಂಟಮ್ ಭೌತಶಾಸ್ತ್ರ ಎನ್ನುತ್ತಾರೆ. ಆಧುನಿಕ ಭೌತಶಾಸ್ತ್ರದ ಇತ್ತೀಚೆಗಿನ ಅಧ್ಯಯನಗಳು ಕ್ವಾಂಟಮ್ ಮೆಕ್ಯಾನಿಕ್ಸ್ ಬಗ್ಗೆ ತೃಪ್ತಿಕರ ವಿವರಣೆ ನೀಡುವಲ್ಲಿ ಯಶಸ್ವಿಯಾಗಿವೆ. ಯಾವುದೇ ಒಂದು ಕಣ, ಇಲೆಕ್ಟ್ರಾನ್, ವಸ್ತು ಅಥವಾ ವ್ಯವಸ್ಥೆಯನ್ನು ನಾವು ಕಾಣುವುದು ಕೇವಲ ಮಾಯೆ. ವಾಸ್ತವವಾಗಿ ಕಣ ಇರುವುದಿಲ್ಲ ಅಥವಾ ಅದು ವ್ಯಕ್ತವಾಗುತ್ತಿರುವ, ಅನುಭವಕ್ಕೆ ಬರುವ ಒಂದು ವಿದ್ಯಮಾನ ಮಾತ್ರ. ಶಕ್ತಿಯು ಪ್ರವಹಿಸುತ್ತಲೇ ಇರುವುದರಿಂದ ಒಂದು ಕಣವು ವಿಶ್ವದ ಎಲ್ಲಾ ಕಣಗಳೊಂದಿಗೆ ಸಂಪರ್ಕದಲ್ಲಿರುತ್ತದೆ ಎನ್ನಲಾಗಿದೆ. ಆಧ್ಯಾತ್ಮಿಕ ಪ್ರಕ್ರಿಯೆಯ ಮೂಲಕ ಸಾಧನೆ ಮಾಡುವುದಕ್ಕೆ ಅನುಭಾವ ಒಂದು ಆಧಾರ. ಆದರೆ ಅನುಭಾವವನ್ನು ವಿವರಿಸುವುದು ಕಷ್ಟ ಮತ್ತು ಅದನ್ನು ಅವೈಜ್ಞಾನಿಕವೆಂದು ತಿಳಿಯುವವರಿದ್ದಾರೆ. ಆದರೆ ಆಧುನಿಕ ಭೌತಶಾಸ್ತ್ರದ ತತ್ತ್ವಗಳು ಭಾರತೀಯ ತತ್ತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಅನುಭವಗಳ ಮೂಲಕ ವಿಜ್ಞಾನಿಗಳು ಹೇಳಿಕೊಂಡ ವಿಷಯಗಳಾಗಿವೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಭೌತಶಾಸ್ತ್ರದಲ್ಲಿ, ಆರಂಭಿಕವಾಗಿ, ಜಗತ್ತಿನ ಎಲ್ಲ ವಸ್ತುಗಳೂ ಅಣುಗಳಿಂದ ಮಾಡಲ್ಪಟ್ಟಿವೆ; ಅಣುವಿನಲ್ಲಿ ಪರಮಾಣುಗಳು ಇರುತ್ತವೆ; ಪರಮಾಣುವಿನೊಳಗೆ ಧನಾತ್ಮಕ ಶಕ್ತಿ ಹೊಂದಿರುವ ಪ್ರೋಟಾನ್, ತಟಸ್ಥವಾಗಿರುವ ನ್ಯೂಟ್ರಾನ್ ನ್ಯೂಕ್ಲಿಯಸ್‌ನಲ್ಲಿದ್ದು, ಇಲ