Posts

Showing posts from June, 2019

🖼️ ಕಾರ್ಟೂನ್ - ಅನಿಮೇಶನ್ ಕಲಿಕಾ ತರಬೇತಿ 🖼️ ನಮ್ಮ 'ಅಮೃತವಾಹಿನಿ'ಯ ಸಹಯೋಗದಲ್ಲಿ ಜರುಗಿದ ಒಂದು ಸುಂದರ ಕಾರ್ಯಕ್ರಮ 🖼️ ಕಾರ್ಟೂನ್ ರಚನೆ ಆಸಕ್ತಿದಾಯಕ: ಜಯರಾಮ ನಾವಡ

Image
ಅಡ್ಯನಡ್ಕ: ಕಾರ್ಟೂನ್ ರಚನೆಯು ಅತ್ಯಂತ ಸುಲಭವಾಗಿ ಮತ್ತು ಆಸಕ್ತಿದಾಯಕವಾಗಿ ಕಲಿಯಬಲ್ಲ ಚಿತ್ರ ರಚನಾ ಪದ್ಧತಿಯಾಗಿದೆ. ಇಂದು ಕಾರ್ಟೂನ್ ಮತ್ತು ಆನಿಮೇಶನ್ ಕ್ಷೇತ್ರದಲ್ಲಿ ಸೃಜನಶೀಲ ಕಲಾವಿದರಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ವ್ಯಂಗ್ಯಚಿತ್ರ ಕಲಾವಿದ ಮತ್ತು ಅನಿಮೇಟರ್ ಜಯರಾಮ ನಾವಡ ನಿಟಿಲಾಪುರ ಅವರು ಹೇಳಿದರು. ಸಾಹಿತ್ಯ ಸಂಘ ಜನತಾ ಪ್ರೌಢಶಾಲೆ ಅಡ್ಯನಡ್ಕ ಮತ್ತು 'ಅಮೃತವಾಹಿನಿ' ಸಹಯೋಗದಲ್ಲಿ ಜೂ.29ರಂದು ಅಡ್ಯನಡ್ಕ ಜನತಾ ಪ್ರೌಢಶಾಲೆಯ ವಾರಣಾಶಿ ಕೃಷ್ಣ ಸಭಾಂಗಣದಲ್ಲಿ ಜರುಗಿದ ಚಿತ್ರಕಲೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳಿಗೆ ಅನಿಮೇಶನ್ ಮತ್ತು ಕಾರ್ಟೂನ್ ರಚನೆಯ ತರಬೇತಿ ನೀಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಚಿತ್ರಕಲಾವಿದ, ವಿನ್ಯಾಸಕಾರ ನವೀನ್ ಜಿ. ಪುತ್ತೂರು ಅವರು ವಿದ್ಯಾರ್ಥಿಗಳಿಗೆ ವಿವಿಧ ಪ್ರಕಾರದ ಚಿತ್ರಕಲೆಯ ಮಾದರಿಗಳನ್ನು ಪರಿಚಯಿಸಿ ಮಾಹಿತಿ ನೀಡಿದರು. ಸಾಹಿತ್ಯ ಸಂಘದ ಗೌರವಾಧ್ಯಕ್ಷರಾದ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕನ್ನಡ ಅಧ್ಯಾಪಕ ಶಿವಕುಮಾರ ಸಾಯ ಅವರು ಪ್ರಸ್ತಾವಿಸಿ, ಪರಿಚಯಿಸಿದರು. ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಾಹಿತ್ಯ ಸಂಘದ ಅಧ್ಯಕ್ಷೆ ಮಧುರಾ ಬಿ. ಸ್ವಾಗತಿಸಿ, ಉಪಾಧ್ಯಕ್ಷೆ ನಾಗವೇಣಿ ಎ. ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೃತಿಕಾ ಎಂ. ಎಸ್. ವಂದಿಸ

🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019

Image
"ವೇದಿಕೆಯಲ್ಲಿರುವ ಗಣ್ಯರೇ, ಸಹೋದ್ಯೋಗಿ ಬಂಧುಗಳೇ, ವಿದ್ಯಾರ್ಥಿಗಳೇ.... 'ಅಂತರರಾಷ್ಟ್ರೀಯ ಯೋಗ ದಿನಾಚರಣೆ' ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಕ್ರೀಡಾ ಸಂಘದ ವತಿಯಿಂದ ಹಮ್ಮಿಕೊಂಡಿರುವ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಒಂದೆರಡು ನುಡಿಗಳು.... ಈ ಯೋಗ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಮಾತ್ರ ಅಲ್ಲ; ನಮ್ಮ ದೇಶದಲ್ಲಿ ಮಾತ್ರ ಅಲ್ಲ; ವಿಶ್ವಮಟ್ಟದಲ್ಲೇ ಆಚರಿಸಲಾಗುತ್ತಾ ಇದೆ. ಈ ಮಾನ್ಯತೆ ದೊರಕಿದ್ದು 2014ರ ಡಿಸೆಂಬರ್‌ನಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಅಥವಾ ವಿಶ್ವಸಂಸ್ಥೆ ಯೋಗವನ್ನು ಅಂತರರಾಷ್ಟ್ರೀಯ ದಿನಾಚರಣೆ ಎಂದು ಘೋಷಿಸಿದ ಬಳಿಕ. ಇನ್ನು ಈ ಯೋಗವನ್ನು ನಾವು ಅಭ್ಯಸಿಸುವುದಕ್ಕೆ ಮೊದಲು ಯೋಗ ಅಂದರೇನು, ಯೋಗವನ್ನು ಯಾಕೆ ಮಾಡಬೇಕು ಇದನ್ನೆಲ್ಲ ತಿಳಿದಿದ್ದರೆ ಒಳ್ಳೆಯದು. ಯೋಗ ನಮ್ಮ ದೇಶದಲ್ಲಿ ಒಂದು ಪರಂಪರೆಯಾಗಿ ಬೆಳೆದದ್ದು. ನಮ್ಮ ದೇಶಕ್ಕೆ ಅದು ಹೊಸದೇನೂ ಅಲ್ಲ. ಯೋಗವಿದ್ಯೆಯು ಇಡೀ ಜಗತ್ತಿಗೆ ಭಾರತೀಯರು ನೀಡಿದ ಕೊಡುಗೆ. ಅದು ನಮ್ಮ ದೇಶದ ಸನಾತನ ಋಷಿಮುನಿಗಳು ಸಾಧಿಸಿ ಕಂಡುಹಿಡಿದ ಮಹಾನ್ ವಿದ್ಯೆ. ಆದ್ದರಿಂದ ನಾವು ಯೋಗದ ಬಗ್ಗೆ ತಿಳಿದಿರಬೇಕು. ಈ ಯೋಗ ಎಂಬ ಶಬ್ದ ಬಂದಿದ್ದು 'ಯುಜ್' ಎಂಬ ಧಾತುವಿನಿಂದ. 'ಯುಜ್' ಅಂದರೆ 'ಒಂದುಗೂಡಿಸುವುದು' ಅಂತ ಅರ್ಥ. ಜೀವಾತ್ಮನನ್ನು ಪರಮಾತ್ಮನ ಜೊತೆ ಒಂದುಗೂಡಿಸುವುದು. ಅಂದರೆ ನಮ್ಮನ್ನು ನಮ್ಮ ದೇಹಕ್ರಿಯೆಗಳ ಕೇಂದ್ರದ ಜೊತೆ ಸೇರಿಸು

ಪ್ರಭಾವಳಿ

Image
ನೀನೊಬ್ಬ ಹಠಯೋಗಿ- ಧ್ಯಾನವೇ ನಿನ್ನ ನಿಯತ್ತು; ತಾಳಬೇಕಿದೆ ಮೌನ ತಾಕತ್ತಿಗಾಗಿ ಒಂದು ಹರಕತ್ತಿನಂತೆ ಕಣ್ಣೆದುರು ತಂದುಕೋ, ನೀನೊಂದು ಬಡಜೀವವಲ್ಲ; ಬಲಿಷ್ಠವಾದ ಪ್ರತಿಮೆಯೇ- ಜನ ಎಷ್ಟೊಂದು ಹೊಡೆದರೂ ವಜ್ರದಂತೆ ಉಕ್ಕಿನ ಜೀವಂತ ಮನುಷ್ಯನಂತೆ ಪ್ರತಿಷ್ಠಿತವಾಗಿರುವೆ ಮೇಲೆರಗುವ ಮನಸ್ಸು ಮಾಡಿದರೆ ಶತ್ರುಗಳು ನೆಪ ಮಾತ್ರಕ್ಕೆ ಚೂರು ಚೂರೇ ಸಿಡಿದು ಸಾಯುವರು ನೀನೊಂದು ಪ್ರಚಂಡ ಪ್ರಭಾವಳಿ- ನಿನ್ನೊಳಗಿರುತ್ತದೆ ಅಖಂಡವೂ; ಆದರೂ ನೀನಿಲ್ಲವಂತೆ ಕೆಲವರೊಳಗೆ ಚಿನ್ಮಯನೇ, ಉಸಿರು ಬಿಡು ಸರಿಯಾಗಿ- ಹೊರ ಕಳಿಸಬೇಕಾದ್ದನ್ನು ಮರೆ; ಉಸಿರೆಳೆದುಕೋ ನೆಲೆ ನಿಲ್ಲುತ್ತ ✍️ಶಿವಕುಮಾರ ಸಾಯ 'ಅಭಿಜಿತ್'

ಸ್ಫೂರ್ತಿ

Image
ನಮ್ಮ ನಾಯಕ ಇವನು ಜಗದ ರಕ್ಷಕ ಶಿವನು; ಶಂಕರ, ಶಶಿಧರ, ವರ ಗಂಗಾಧರ ದೇವನೊಬ್ಬ ನಾಮ ಹಲವು, ಮನೋಹರ! ಇದು ಹೊಸ ಇತಿಹಾಸದ ಪ್ರದರ್ಶನ, ಮಹಾಶಕ್ತಿ - ಸುದರ್ಶನ - ನಿದರ್ಶನ; ಪಂಥದಲ್ಲಿ ಗೆಲ್ಲುತ್ತಾನೆ ಹಿಗ್ಗುತ, ಸಂತೆಯಲ್ಲಿ ಸಾಗುತ್ತಾನೆ ನುಗ್ಗುತ! ಉಸಿರಾಡುವ ಗಾಳಿಯ ಬೀಸಿ, ಹಸಿರೆಲೆಯ ತೋರಣ ಮೆರೆಸಿ, ಸ್ವಯಂಪ್ರಭೆಯ ಬೀರುತ್ತಾನೆ ಪ್ರವರ್ತಕ ಲೋಕವೆಲ್ಲ ಇವನಿಂದ್ಲೇ ಸಾರ್ಥಕ! ನಮ್ಮ ಮನದ ಮನೆಯ ಸ್ಫೂರ್ತಿ, ಈ ಭೂಮಂಡಲದ ಕೀರ್ತಿ; ಸಾರಬೇಕು ಸೋಜಿಗದ ಸಂಗತಿ ಮೆಚ್ಚಿಕೊಂಡು ಹಚ್ಚಬೇಕು ಆರತಿ! ✍️ಶಿವಕುಮಾರ ಸಾಯ 'ಅಭಿಜಿತ್'