Posts

Showing posts from October, 2024

ಅವಕಾಶ

Image
ಗಾಯಗೊಂಡ ಸಿಂಹವನ್ನು ಕೆಣಕುವುದು ಅತ್ಯಂತ ಅಪಾಯಕಾರಿ ಗಾಯ ಒಂದೇ ಆಗಲಿ ಹತ್ತೇ ಆಗಲಿ ಗುಣವಾಗಲು ಬೇಕಾದ ಸಮಯ ಒಂದೇ ಸ್ಟಾಕ್ ಮಾರ್ಕೆಟ್‌ನಲ್ಲಿ ಎಂಟು ನಿಮಿಷಕ್ಕೆ ಹನ್ನೆರಡು ಸಾವಿರವಾದ ಅನುಭವದ ಬಳಿಕ ಹಣ ಮಾಡುವುದು ದೊಡ್ಡ ಸಂಗತಿಯೇ ಅಲ್ಲ ಬದುಕಲ್ಲಿ ಆದರೂ ಟ್ರೇಡಿಂಗ್ ಮಾಡಬೇಡ ಮಗೂ ಹೂಡಿಕೆ ಮಾತ್ರ ಮಾಡು ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿ ಕತೆ ಎರಡು ಸಲ ಕೇಳಿ ಜ್ಞಾನೋದಯವಾದದ್ದು ಮರೆಯಬೇಡ ಐದು ಹದಿನೈದಕ್ಕೆ ಚಂದನದಲ್ಲಿ ಕೇಳಿದ್ದು ಏಂಜೆಲ್‌ನವನು ಏಳು ಹದಿನೈದಕ್ಕೆ ಹೇಳಿದ್ದು ಎರಡರಲ್ಲೂ ಕತೆ ಒಂದೇ ಉದಾಹರಣೆಗೆ ಬಂದದ್ದು ಗ್ರಹಗತಿ ಬದಲಾಗುವ ವರೆಗೆ ಕಾಯಬೇಕು ಸುಧಾರಣೆ ಆದೀತು ಮಂತ್ರವಾದ ಮೊನ್ನೆಯೇ ಮುಗಿಯಿತು ಗಾಯದಿಂದ ತಾಗಿದವರು ಸುಮ್ಮನೆ ತಾಡಿ ತಾಗಿಸಿಕೊಂಡವರು ಕ್ಷಮಿಸಬೇಕು ಆಗುವುದೆಲ್ಲ ಒಳ್ಳೆಯದಕ್ಕೇ ಆದರೂ ಪ್ರತಿಯೊಂದಕ್ಕೂ ಕಾಲ ಕೂಡಿ ಬರಬೇಕು ಇದೊಂದು ಪ್ರಕಟಣೆ: ಯಾವಾಗ ಯಾವ ಆಟ ಆಡಬೇಕು ಎಲ್ಲವನ್ನೂ ಆಡಲಾಗುತ್ತದೆ ಅಂಗಳದಲ್ಲಿ ಊಹೆಗೆ ನಿಲುಕದಂತೆ ಬೇನಾಮಿ ವ್ಯಕ್ತಿಗಳು ದಿನ ಬೆಳಗಾಗುವುದರೊಳಗೆ ಮೈಲ್ ಮಾಡುತ್ತಾರೆ ಕೇಂದ್ರಕ್ಕೆ ಅವಕಾಶ ಕೊಡುವುದಕ್ಕೆ 'ಅವಕಾಶ ಯಾರೊಬ್ಬರ ಪಿತ್ರಾರ್ಜಿತ ಸೊತ್ತಲ್ಲ' ಎಂದು ಆದೇಶ ಬಂದೀತು ಕೋರ್ಟಿನಿಂದ ಚುಚ್ಚಿ ಮಾತಾಡುವವರು ಬೆಣ್ಣೆ ತೋರಿಸಿ ಬಾಯಿ ಮುಚ್ಚಿಸಿ ಬೇಳೆ ಬೇಯಿಸಿಕೊಂಡವರ ಬಂಡವಾಳ ಹೊರಬಿತ್ತು ಸಕಲ ಮಹಾಜನಕ್ಕೂ ಅದು ಅರ್ಥವಾಯ್ತು. ✍️ ಶಿವಕುಮಾರ್ ಸಾಯ 'ಅಭಿಜಿತ್...