ಅಕಾಶದಲ್ಲಿ ಅಸ್ತಿತ್ವ
ಆಕಾಶದ ಬಗ್ಗೆ ನಾನು ಇವತ್ತು ಬರೆಯಲೇ ಬೇಕಿತ್ತು. ಅದು ಹೇಗೆ ನಮ್ಮ ಅಸ್ತಿತ್ವವು ಆಕಾಶದಲ್ಲಿದೆ ಎಂಬ ಬಗ್ಗೆ ಈ ಲೇಖನದಲ್ಲಿ ಬರೆದುಕೊಂಡಿದ್ದೇನೆ. ಆಕಾಶವೆಂದರೆ ನಮ್ಮ ಇರುವಿಕೆಗೆ ಇರುವ ಸ್ಥಳಾವಕಾಶ. ವಸ್ತುಗಳು ಘನ, ದ್ರವ, ಅನಿಲ, ಪ್ಲಾಸ್ಮಾ - ಹೀಗೆ ವಿವಿಧ ರೂಪದಲ್ಲಿ ನಮಗೆ ಅನುಭವಕ್ಕೆ ಬರುತ್ತವೆ, ನಿಜ. ಆದರೆ ಎಲ್ಲಾ ವಸ್ತುಗಳ ಪರಮಾಣುವಿನ ಕಣದ ಆದಿಮೂಲಕ್ಕೆ ಹೋದಾಗ ವಿಜ್ಞಾನವು ಹೇಳುತ್ತಿರುವುದು ಏನನ್ನು ಎಂದರೆ ಈ ಭೌತಿಕ ಪ್ರಪಂಚದಲ್ಲಿ 99.99% ಬರೀ ಖಾಲಿ ಇದೆ ಎಂಬುದನ್ನು. ಹಾಗಾದರೆ ನಮಗೆ ಗೋಚರವಾಗುವ ವಸ್ತುಗಳಿಗೆ ವಿಭಿನ್ನ ಸ್ವರೂಪ ಬಂದದ್ದು ಈ ನೂರು ಶೇಕಡಾ ಖಾಲಿಯೊಳಗೆ ಇರಬಹುದಾದ ವಿಭಿನ್ನತೆಯಿಂದ, ಅಲ್ಲಿನ ಚಲಿಸುವ ಮತ್ತು ಚಲನೆಗೆ ಪ್ರೇರಿಸುವ ಕಾಯಗಳಿಂದ. ಸುಲಭವಾಗಿ ಹೇಳುವುದಿದ್ದರೆ ಅವು ಒಂದು ನಿಷ್ಪತ್ತಿಯ ಕಾಸ್ಮಿಕ್ ಚೈತನ್ಯ. ಕೇವಲ ಕಾರ್ಯಗಳ ಮೂಲಕವಷ್ಟೇ ಕಾಯಗಳು ವ್ಯಕ್ತವಾಗುತ್ತವೆ. ಅಲ್ಲದೆ, ಚಲನಶೀಲ ಮತ್ತು ಪರಿವರ್ತಿತವಾಗುವ ಪ್ರಕೃತಿಸ್ವರೂಪದ್ದು ಅದು. ಹಾಗಾಗಿ ಎಲ್ಲವೂ ಪ್ರತ್ಯೇಕವಾಗಿ ಇಲ್ಲದೇ ಈ ಆಕಾಶದಲ್ಲೇ ಇದೆ ಎನ್ನಬಹುದು. ಅಂದರೆ, ಚೈತನ್ಯಕ್ಕೆ ಪ್ರತ್ಯೇಕ ಅಸ್ತಿತ್ವ ಇಲ್ಲದ್ದರಿಂದ ನಾವು ಆಕಾಶ ಅಂದರೆ ಸ್ಪೇಸ್ ಮೇಲೆ ನಂಬಿಕೆಯಿಟ್ಟರೆ ಮುಗಿಯಿತು. ಅಸ್ತಿತ್ವ ಎನ್ನುವಂಥದ್ದು ಇರುವುದೇ ಈ ಸ್ಪೇಸ್‌ನಲ್ಲಿ. ಆ ಆಕಾಶ ಎಂಬುದು ಅಂತಹ ಖಾಲಿತನ ಅಂದರೆ ಅವಕಾಶ ಅಥವಾ ಸರ್ವಸ್ವದ ನಿರ್ಮಿತಿಯ ಮೂಲ ಮತ್ತು ಆಶ್ರಯತಾಣ...