ಸುತ್ತೋಲೆ
ಹಲೋ ಮಗನೇ! ಹಾಯಾಗಿ ಮುನ್ನಡೆ, ಹೌದು, ಈ ಭೂಮಿ ಸೊಗಸಾಗಿದೆ. ನಿಶ್ಚಿಂತನಾಗು, ನಿತ್ಯ ಸಂತೋಷಿಯಾಗು, ನಿನ್ನಿಷ್ಟದಂತೆ ನೀನಿರು; ಬೊಗಳೆಗೆ ಬೆಚ್ಚದಿರು, ಹಬ್ಬ ಮಾಡುತ್ತ ಜೀವಿಸು. ಸಣ್ಣದಲ್ಲದ ಕತೆ, ದೊಡ್ಡದರ ವಾಸ್ತವತೆ, ಘನ - ಗಂಭೀರ ನಡೆ, ವರ್ತಮಾನವ ಅರಿತುಕೋ - ಕೇಡುಗಳ ನುಗ್ಗುನುರಿ ಮಾಡಿ, ನಾಟು, ದಾಟು. ನಿರಂತರ ನಡೆವ ಕಸರತ್ತು, ಕರಾಮತ್ತು, ಬದಲಾವಣೆಯ ಪರ್ವ - ಎಲ್ಲವೂ ಒಂದು ಥರ ಚಂದ! ಮಾಯೆ! ನಗುವಿನ ಬುಗ್ಗೆ ವ್ಯಾಪಾರ, ಕ್ಯಾಶ್ಲೆಸ್ ವ್ಯವಹಾರ, ನಕಲಿ ಶೃಂಗಾರ ಹಾಗೂ ಬೇರೇನಿದೆ ನೋಡೋಣ ಈ ಜಗತ್ತಲ್ಲಿ ನಾವೂ ಒಂದು ಸುತ್ತೋಲೆ ಹೊರಡಿಸಿ ಸುತ್ತೋಣ. ✍️ ಶಿವಕುಮಾರ ಸಾಯ 'ಅಭಿಜಿತ್'