ಸುತ್ತೋಲೆ
ಹಲೋ ಮಗನೇ!
ಹಾಯಾಗಿ ಮುನ್ನಡೆ,
ಹೌದು,
ಈ ಭೂಮಿ ಸೊಗಸಾಗಿದೆ.
ನಿಶ್ಚಿಂತನಾಗು,
ನಿತ್ಯ ಸಂತೋಷಿಯಾಗು,
ನಿನ್ನಿಷ್ಟದಂತೆ ನೀನಿರು;
ಬೊಗಳೆಗೆ ಬೆಚ್ಚದಿರು,
ಹಬ್ಬ ಮಾಡುತ್ತ ಜೀವಿಸು.
ಸಣ್ಣದಲ್ಲದ ಕತೆ,
ದೊಡ್ಡದರ ವಾಸ್ತವತೆ,
ಘನ - ಗಂಭೀರ ನಡೆ, ವರ್ತಮಾನವ
ಅರಿತುಕೋ -
ಕೇಡುಗಳ ನುಗ್ಗುನುರಿ ಮಾಡಿ,
ನಾಟು, ದಾಟು.
ನಿರಂತರ ನಡೆವ
ಕಸರತ್ತು, ಕರಾಮತ್ತು,
ಬದಲಾವಣೆಯ ಪರ್ವ -
ಎಲ್ಲವೂ ಒಂದು ಥರ ಚಂದ!
ಮಾಯೆ!
ನಗುವಿನ ಬುಗ್ಗೆ ವ್ಯಾಪಾರ,
ಕ್ಯಾಶ್‌ಲೆಸ್ ವ್ಯವಹಾರ,
ನಕಲಿ ಶೃಂಗಾರ ಹಾಗೂ
ಬೇರೇನಿದೆ ನೋಡೋಣ
ಈ ಜಗತ್ತಲ್ಲಿ ನಾವೂ ಒಂದು
ಸುತ್ತೋಲೆ ಹೊರಡಿಸಿ
ಸುತ್ತೋಣ.
✍️ ಶಿವಕುಮಾರ ಸಾಯ 'ಅಭಿಜಿತ್'
ಸುಪರ್ 😊
ReplyDelete