ಅನಂತ ಅನುಗ್ರಹ, ಅಪರಿಮಿತ ಪ್ರೀತಿ.... ಇದು ಬ್ರಹ್ಮಾಂಡದ ಪರಮ ಕೃಪೆ, ಶಕ್ತಿ!
ಲೋಕ ನಡೆಯುತ್ತಿರುವುದು ಅಗಾಧವಾದ ಅನುಗ್ರಹದಿಂದ ಮಾತ್ರ! ಇಲ್ಲಿ ಭೂಮಿ ಮತ್ತು ಚಂದ್ರನ ನಡುವಿನ ದೂರ, ಭೂಮಿ ಮತ್ತು ಸೂರ್ಯನ ನಡುವಿನ ದೂರ, ಚಲನೆಗಳು, ವಿವಿಧ ಆಕಾಶಕಾಯಗಳಿಗೆ ಇರುವ ದ್ರವ್ಯರಾಶಿ, ಗುರುತ್ವ ಇವೆಲ್ಲ ಈ ಅನುಭವದ ಕೇಂದ್ರವಾಗಿರುವ 'ನಾನು' ಬದುಕುವುದಕ್ಕೆ ಎಷ್ಟೊಂದು ಪರ್ಫೆಕ್ಟ್ ಆಗಿ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ! ಅದಕ್ಕಾಗಿ ನನ್ನ ಅನಂತ ಕೃತಜ್ಞತೆಗಳು. ಹೌದು. ಭೌತಶಾಸ್ತ್ರದ ಕ್ವಾಂಟಮ್ ಫಿಸಿಕ್ಸ್‌ಗೆ ಇಲ್ಲಿ ಅಷ್ಟೊಂದು ಮಹತ್ವವಿದೆ. ಎಲ್ಲಾ ಮೂಲವಸ್ತುಗಳ, ಪದಾರ್ಥಗಳ, ಯೌಗಿಕಗಳ, ಎಲ್ಲಾ ರೂಪರೂಪಗಳ ಹಿಂದೆಯೂ ಇಂತಹ ಒಂದು ಚೈತನ್ಯದ ಮಹಾಪ್ರವಾಹವೇ ಇದೆ. ಪ್ರತಿಯೊಂದು ಇಲೆಕ್ಟ್ರಾನ್ ಇಲ್ಲಿ ಸ್ಥಾನಪಲ್ಲಟವಾಗುತ್ತಾ ಚೇತನವು ವಿವಿಧ ಚೈತನ್ಯದ ರೂಪಗಳಾಗಿರುತ್ತಾ ಒಟ್ಟು ಶಕ್ತಿ ಒಂದೇ ಆಗಿರುವ, ಹಾಗಿದ್ದರೂ ಅದರ ಪ್ರಮಾಣ ಅಪರಿಮಿತ, ಅನಂತ ಆಗಿರುವ ರೋಚಕ ವ್ಯವಸ್ಥೆ ಇದು. ಇಲ್ಲಿ 'ತಾನು' ಎಂದು ಭಾವಿಸುವಲ್ಲಿ ಮಾತ್ರ ತಾನು ಇರಬಲ್ಲೆ ಎಂಬುದು ಹೊಳೆಯಲೇ ಬೇಕು. ಏಕೆಂದರೆ ಇಂತಹ ಇರುವಿಕೆ ಅದ್ಭುತ ಕನಸಲ್ಲಿ ಮಾತ್ರ ಸಾಧ್ಯ! ಅದಕ್ಕೆ ಇದು ಅಂತಹ ಮಹಾನ್ ಮಹಾನ್ ಕನಸು! ನಾವು ಕನಸು ಎನ್ನುವುದು ಏನನ್ನು? ಹುಲಿಯೊಂದು ಆಕಾಶಕ್ಕೆ ಜಿಗಿದಂತೆ ಕಾಣುವ ಘಟನೆ - ಅಸಂಬದ್ಧವೂ, ಅಸಂಭವವೂ ಎನಿಸುವಂತಿದ್ದರೆ ಅದು ಕನಸಲ್ಲಿ ಮಾತ್ರ ಎನ್ನುತ್ತೇವೆ. ಅಂದರೆ ತುಂಬಾ ವಿಚಿತ್ರವಾದುದನ್ನು, ಪವಾಡದಂತಿರುವುದನ್ನು ನಾವು ಕನಸ...