ಮೆರವಣಿಗೆ
ಕಾಡುತಿಹ ಮೌನದ ಆಚೆ ಕಾಣಬಹುದೊಂದು ಮಜಲು; ಆಶಿಸಿದೆ ನನ್ನ ಮನ ತಪಿಸಿ, ತಡಕಾಡಿ.... ಬೀರುತಿಹ ಬಿಂಕದ ಆಚೆ ತೋರಬಹುದೊಂದು ಅಮಲು; ಕಾಯುತಿದೆ ಬಣ್ಣಬಣ್ಣದ ಖಾಸಗಿ ಮಹಲು. ದೀಪಗಳು ಬೆಳಗಿವೆ, ಗಂಟೆಗಳು ಮೊಳಗಿವೆ; ಪ್ರಣಯದ ಹಾಡಿಗೆ ಹುಟ್ಟುತಿದೆ ಸಂಗೀತ. ರಾತ್ರಿಗಳು ನೂರಾರು ಕಥೆಗಳ ಹೊತ್ತು ತರುತಲಿದೆ; ಆಕಾಶದಲ್ಲಿ ಬಣ್ಣಗಳ ಮೆರವಣಿಗೆ ಬರುತಲಿದೆ. ಸ್ವಾಗತವೂ ವಂದನೆಯೂ ಸಂತೋಷಕ್ಕಾಗಿ; ಹೃದಯದ ಮಿಡಿತಕ್ಕೀಗ ಪದವೊಂದು ಬೇಗ ಮೂಡಲಿ. ಸಂಕಟವ ಮರೆತ ಸಲ್ಲಾಪ ನನ್ನ ನಿನ್ನ ಇನಿದನಿ; ಸಾಂಗತ್ಯದಿಂದ ಹರಿಯಲಿ ಅಮೃತದ ವಾಹಿನಿ. ✍️ಶಿವಕುಮಾರ ಸಾಯ