ಮೆರವಣಿಗೆ
ಕಾಡುತಿಹ ಮೌನದ ಆಚೆ
ಕಾಣಬಹುದೊಂದು ಮಜಲು;
ಆಶಿಸಿದೆ ನನ್ನ ಮನ
ತಪಿಸಿ, ತಡಕಾಡಿ....
ಬೀರುತಿಹ ಬಿಂಕದ ಆಚೆ
ತೋರಬಹುದೊಂದು ಅಮಲು;
ಕಾಯುತಿದೆ ಬಣ್ಣಬಣ್ಣದ
ಖಾಸಗಿ ಮಹಲು.
ದೀಪಗಳು ಬೆಳಗಿವೆ,
ಗಂಟೆಗಳು ಮೊಳಗಿವೆ;
ಪ್ರಣಯದ ಹಾಡಿಗೆ
ಹುಟ್ಟುತಿದೆ ಸಂಗೀತ.
ರಾತ್ರಿಗಳು ನೂರಾರು
ಕಥೆಗಳ ಹೊತ್ತು ತರುತಲಿದೆ;
ಆಕಾಶದಲ್ಲಿ ಬಣ್ಣಗಳ
ಮೆರವಣಿಗೆ ಬರುತಲಿದೆ.
ಸ್ವಾಗತವೂ ವಂದನೆಯೂ
ಸಂತೋಷಕ್ಕಾಗಿ;
ಹೃದಯದ ಮಿಡಿತಕ್ಕೀಗ
ಪದವೊಂದು ಬೇಗ ಮೂಡಲಿ.
ಸಂಕಟವ ಮರೆತ ಸಲ್ಲಾಪ
ನನ್ನ ನಿನ್ನ ಇನಿದನಿ;
ಸಾಂಗತ್ಯದಿಂದ ಹರಿಯಲಿ
ಅಮೃತದ ವಾಹಿನಿ.
✍️ಶಿವಕುಮಾರ ಸಾಯ
Comments
Post a Comment