ಗುರುದರ್ಶನ
ನಿನ್ನೊಳಗೆ ಎಲ್ಲವೂ ಇರುವುದರಿಂದಲೇ
ದರ್ಶನವು ಸಾಧ್ಯ;
ಗುರುದರ್ಶನವೆಂದರೆ
ದೊಡ್ಡದರ ದರ್ಶನ.
ಬ್ರಹ್ಮ ಕಲ್ಪ!
ಅಗಣಿತ ಬ್ರಹ್ಮಾಂಡಗಳಲ್ಲಿ
ಕಲ್ಪಿಸಿ
ಕಾಲಿಡುತ್ತಾ
ಅನಂತದಲ್ಲಿ ವ್ಯಾಪಿಸಿ,
ದೇಶ ಕಾಲದಳತೆಯಲ್ಲಿ
ದಿಕ್ಸೂಚಿಯಾಗಿ ಸಾಗಿ,
ಎಲ್ಲವ ರೂಪಿಸಿ, ನಿರೂಪಿಸಿ,
ಅಣು - ಪರಮಾಣುಗಳಲ್ಲಿ ಅಯಾನೇ ಆಗಿ,
ಚರಾಚರಗಳಲ್ಲಿ ಚಿರಂತನವಾಗಿ
ಚಲಿಸುತ್ತಿರುವೆ.
ಬೆಳಕಿನ ಚೈತನ್ಯದ್ದು
ನಡೆದದ್ದೇ ದಾರಿ,
ಪರಿಣಾಮ ಚಿರಂಜೀವ.
ಲೋಕ ಲೋಕಗಳ ಇಂಚಿಂಚಲ್ಲೂ ತೋಚಿ,
ಅಖಂಡ ಆಯಾಮಗಳಲ್ಲಿ ಗೋಚರಿಸಿ,
ಹಗಲಿರುಳೆನ್ನದೆ, ಹುಟ್ಟುಸಾವೆನ್ನದೆ,
ನಿನ್ನಷ್ಟಕ್ಕೆ ನೀನಿದ್ದು ಮಾಡುತಿಹೆ
ಸದ್ದು -
ನಿನ್ನದೊಂದು ವಿಸ್ಮಯದ ಚಲನೆ,
ಅಪರಿಮಿತ, ಅಸೀಮ,
ನಿಸ್ಸೀಮ.
ಪ್ರಕೃತಿಯಲ್ಲಿ ಪವಾಡ,
ನೂರಾರು ವಿದ್ಯೆ, ಚಮತ್ಕಾರ;
ನೂರೆಂಟರಲ್ಲಿ ನೀನು ಒಂದಾಗಿ,
ಕಣ್ತೆರೆದದ್ದು ದೊಡ್ಡದೇ.
✍️ ಶಿವಕುಮಾರ ಸಾಯ 'ಅಭಿಜಿತ್'

Comments
Post a Comment