Posts

Showing posts from April, 2020

ಆನ್‌ಲೈನ್ ಮದುವೆ!

Image
ಆನ್‌ಲೈನ್ ಮದುವೆಗಳು ಆನ್‌ಲೈನ್‌ನಲ್ಲೇ ಸಂಸಾರ ಆನ್‌ಲೈನ್‌ನಲ್ಲಿ ವ್ಯವಹಾರ ಆನ್‌ಲೈನ್‌ನಲ್ಲೇ ಮಕ್ಕಳು?! ಆನ್‌ಲೈನ್‌ನಲ್ಲೇ ಕುದುರುತ್ತದೆ ವ್ಯಾಪಾರ ಸಾಗಾಟ, ಸಂಚಾರ ಬಿಟ್ಟು ನಡೆಯುತ್ತದೆ ಈಗ ಸುಖ-ಸಂತೋಷದ ರಫ್ತು ಕೈಗಾರಿಕೆ, ಕಲೆಗಾರಿಕೆ ಎಲ್ಲ ಆನ್‌ಲೈನ್‌ನಲ್ಲಿ ಏನಿದು ಮೋಡಿ ಆದರಂತೆ ಅವರಿಬ್ಬರು ಜೋಡಿ ಹೇಗೋ ಏನೋ ಒಬ್ಬರನೊಬ್ಬರು ಮೆಚ್ಚಿ ಒಡನಾಡಿ ಆನ್‌ಲೈನ್‌ನಲ್ಲೇ ಒಟ್ಟು ಕೂಡಿ ಮೂಡುತ್ತಿವೆ ಹೊಸ ವಿಚಾರಗಳು ಹೊಸ ಚಿಂತನೆಗಳು ಹೊಸ ಬಯಕೆ ಹಾಗೂ ಹೊಸ ದಿಶೆಗಳು ಬದುಕು ಎಷ್ಟು ವಿಶಾಲವಾಗಿದೆ ಜಗತ್ತು ಎಷ್ಟು ವಿಸ್ತಾರವಾಗಿದೆ ಜ್ಞಾನೋದಯವಾಗುತ್ತಿದೆ ಹಸಿ ಹಸಿ ತಿನ್ನಬಾರದಂತೆ ಬೇಯಿಸಿ ತಿನ್ನೋಣ ಎಲ್ಲವನ್ನೂ; ಕೊರೋನಾ ಬಂದ ಮೇಲೆ ಏನೋ ಶುರುವಾಗಿದೆ ಎದೆಯಲ್ಲೀಗ ಢವಢವ ಎನ್ನುತ್ತಿದೆ. ✍️ ಶಿವಕುಮಾರ ಸಾಯ

ಶಾಂತಿಯುದ್ಧದ ಮತ್ತೊಂದು ಪರಿ... ಸಂತೋಷಕ್ಕಾಗಿ...

Image
ಅಧ್ಯಾತ್ಮ ಮತ್ತು ವಿಜ್ಞಾನಕ್ಕೆ ಹತ್ತಿರದ ನಂಟು ಇದೆ. Strong nuclear force, Weak nuclear force, Electromagnetic force, Gravitational force - ಅಧ್ಯಾತ್ಮದಲ್ಲಿ ಒಮ್ಮೆ ಒಂದು ಕಲ್ಪನೆಯಾಗಿದ್ದದ್ದು ವಿಜ್ಞಾನದಲ್ಲಿ ಮತ್ತೊಂದು ಕಾಲದಲ್ಲಿ ಸಾಧಿಸಲ್ಪಟ್ಟಿದೆ. ಆಧ್ಯಾತ್ಮಿಕವಾಗಿ ಎಲ್ಲದರ ಕಾರ್ಯ, ಕಾರಣ ಸಂಕಲ್ಪ. ಸಂಕಲ್ಪಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಒಂದು ಬಲಿಷ್ಠವಾದ ಸಂಕಲ್ಪದಿಂದಲೇ ಎಲ್ಲವೂ ನಡೆಯುತ್ತಿದೆ. ಪ್ರಾಯಶಃ ಅದಕ್ಕಾಗಿಯೇ "Spiritual is stronger than any material force, that thoughts rule the world" ಎಂದು ಎಮರ್ಸನ್ ಹೇಳಿದ್ದಾನೆ. ಭಾರತೀಯ ತತ್ತ್ವಶಾಸ್ತ್ರದಲ್ಲೂ ಎಲ್ಲೆಂದರಲ್ಲಿ ಅಂತಹ ಶಕ್ತಿಯ ಬಗ್ಗೆ ಬಣ್ಣನೆಯಾಗಿದೆ. "ಅಹಂ ಬ್ರಹ್ಮಾಸ್ಮಿ" ಎಂಬ ಆದಿ ಶಂಕರಾಚಾರ್ಯರ ಸಿದ್ಧಾಂತವಿರಬಹುದು, "Iam everywhere" ಎಂದೇ ಅಂತಿಮವಾಗಿ ಹೇಳುವ ವಿಜ್ಞಾನದ ಅತ್ಯಂತ ದೊಡ್ಡ ಸಿದ್ಧಾಂತಗಳಾದ "ಜಗತ್ತಿನ ಮಾಯಾಜಾಲ", "ಸರ್ವತತ್ತ್ವ", "ಆಯಾಮಗಳು", "ಬಿಗ್ ಬ್ಯಾಂಗ್" ಮುಂತಾದ ಒಂದಷ್ಟು ಥಿಯರಿಗಳು ಹೊರಗೆಡಹಿದ ಅಂತರಾರ್ಥವಿರಬಹುದು - ಯಾರಿಗಾದರೂ ಈ ಅದ್ಭುತ ಶಕ್ತಿಯ ಬಗ್ಗೆ ಅಚ್ಚರಿ ಮತ್ತು ಕುತೂಹಲ ಮೂಡುತ್ತದೆ. ನಾವು ಯಾವುದೇ ಕಷ್ಟಗಳಿಂದ ಪಾರಾಗಲಿಕ್ಕಾಗಲೀ, ಸರಳರೇಖೆಯಂತೆ ಸಂತೋಷದ ದಿನಗಳೊಂದಿಗೆ ಬಾಳಲಿಕ್ಕಾ...