ಆನ್‌ಲೈನ್ ಮದುವೆ!
ಆನ್‌ಲೈನ್ ಮದುವೆಗಳು
ಆನ್‌ಲೈನ್‌ನಲ್ಲೇ ಸಂಸಾರ
ಆನ್‌ಲೈನ್‌ನಲ್ಲಿ ವ್ಯವಹಾರ
ಆನ್‌ಲೈನ್‌ನಲ್ಲೇ ಮಕ್ಕಳು?!
ಆನ್‌ಲೈನ್‌ನಲ್ಲೇ ಕುದುರುತ್ತದೆ ವ್ಯಾಪಾರ
ಸಾಗಾಟ, ಸಂಚಾರ ಬಿಟ್ಟು
ನಡೆಯುತ್ತದೆ ಈಗ ಸುಖ-ಸಂತೋಷದ ರಫ್ತು
ಕೈಗಾರಿಕೆ, ಕಲೆಗಾರಿಕೆ
ಎಲ್ಲ ಆನ್‌ಲೈನ್‌ನಲ್ಲಿ
ಏನಿದು ಮೋಡಿ
ಆದರಂತೆ ಅವರಿಬ್ಬರು ಜೋಡಿ
ಹೇಗೋ ಏನೋ
ಒಬ್ಬರನೊಬ್ಬರು ಮೆಚ್ಚಿ ಒಡನಾಡಿ
ಆನ್‌ಲೈನ್‌ನಲ್ಲೇ
ಒಟ್ಟು ಕೂಡಿ
ಮೂಡುತ್ತಿವೆ ಹೊಸ ವಿಚಾರಗಳು
ಹೊಸ ಚಿಂತನೆಗಳು
ಹೊಸ ಬಯಕೆ ಹಾಗೂ ಹೊಸ ದಿಶೆಗಳು
ಬದುಕು ಎಷ್ಟು ವಿಶಾಲವಾಗಿದೆ
ಜಗತ್ತು ಎಷ್ಟು ವಿಸ್ತಾರವಾಗಿದೆ
ಜ್ಞಾನೋದಯವಾಗುತ್ತಿದೆ
ಹಸಿ ಹಸಿ ತಿನ್ನಬಾರದಂತೆ
ಬೇಯಿಸಿ ತಿನ್ನೋಣ
ಎಲ್ಲವನ್ನೂ;
ಕೊರೋನಾ ಬಂದ ಮೇಲೆ
ಏನೋ ಶುರುವಾಗಿದೆ
ಎದೆಯಲ್ಲೀಗ
ಢವಢವ ಎನ್ನುತ್ತಿದೆ.
✍️ ಶಿವಕುಮಾರ ಸಾಯ
ತುಂಬಾ ಚೆನ್ನಾಗಿದೆ ಈ ಕವಿತೆ... ಪ್ರಸ್ತುತ ಕಾಲವನ್ನ ಒಳ್ಳೆಯ ರೀತಿಯಲ್ಲಿ ತಿಳಿಸಿದ್ದೀರಿ..
ReplyDelete