ಆದರ್ಶ ಗುರು, ಆತ್ಮೀಯ ಸ್ನೇಹಿತ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್
ಜೀವನದಲ್ಲಿ ಕೆಲವು ಮಹಾತ್ಮರು ನಮಗೆ ಅಕಸ್ಮಾತ್ ಸಿಗುತ್ತಾರೆ. ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಆದರ್ಶ ನಡೆ-ನುಡಿಗಳಿಂದ ಪ್ರಜ್ವಲಿಸುತ್ತಾರೆ. ಅಂತಹ ಒಬ್ಬರು ಅಪರೂಪದ ಆದರ್ಶ ವ್ಯಕ್ತಿ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್. ಶ್ರೀಯುತರು ಒಬ್ಬರು ಆದರ್ಶ ಕನ್ನಡ ಉಪನ್ಯಾಸಕರು ಎಂದು ಮನದುಂಬಿ ನಾನು ನನ್ನ ಖಾಸಗಿ ಬ್ಲಾಗ್‌ನಲ್ಲಿ ಬರೆದುಕೊಳ್ಳುವಾಗ ನನ್ನ ಕಣ್ಣಾಲಿಗಳೇಕೋ ಭಾವಪೂರ್ಣವಾಗಿ ತೇವವಾಗುತ್ತಿವೆ. ನಾನು ಅಡ್ಯನಡ್ಕ ಜನತಾ ಪ್ರೌಢಶಾಲೆಗೆ ಅಧ್ಯಾಪಕನಾಗಿ ಸೇರಿದ ಸರಿಸುಮಾರು ಒಂದು ವರ್ಷದಲ್ಲಿ ಶ್ರೀಯುತ ಶೀನಪ್ಪ ನಾಯ್ಕರ ಪರಿಚಯವಾಗಿತ್ತು. ಅವರು ಜನತಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಯನ್ನು ಅಲಂಕರಿಸಿದ್ದರು. ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಭಾಷೆಯ ಬೆಳವಣಿಗೆ, ಕನ್ನಡ ಸಂಸ್ಕೃತಿಯ ಉಳಿವು, ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವತೋಮುಖ ವಿಕಾಸಕ್ಕಾಗಿ ನಿರಂತರ ಪರಿಶ್ರಮಿಸಿದ ಒಬ್ಬರು ಅಪ್ಪಟ ಆದರ್ಶ ವ್ಯಕ್ತಿ ಎಂಬ ಚಾರಿತ್ರ್ಯ ಇವರಿಗಿತ್ತು. ಹಲವಾರು ಸಾಹಿತ್ಯ ಸಮ್ಮೇಳನ, ಫೆಸ್ಟ್‌ಗಳಲ್ಲಿ ಇವರ ನಿರೂಪಣೆ ಆಕರ್ಷಕವಾಗಿರುತ್ತಿತ್ತು. ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಇವರು ಕನ್ನಡ ಉಪನ್ಯಾಸಕರಾದ ಬಳಿಕ, ಸದ್ದಿಲ್ಲದೇ ಕನ್ನಡ ಉಳಿಸುವ ಕೈಂಕರ್ಯವನ್ನು ನಡೆಸುತ್ತಲೇ ಬಂದಿದ್ದಾರೆ. ಕಾಲೇಜಿನ ಯಾವುದೇ ಕಾರ್ಯಕ್ರಮಗಳಲ್ಲಿ ಇವರ ಸರಳ - ಸುಂದರ, ಪಾಂಡಿತ್ಯಪೂರ್ಣ ನಿರೂಪಣೆ ಆಕರ್ಷ...