ಪ್ರಶಾಂತಿ ವಿದ್ಯಾಲಯ ( ಆಶುಕವನ )
ಪ್ರಶಾಂತಿ ವಿದ್ಯಾಲಯ,
ಇದು ಜ್ಞಾನದ ದೇವಾಲಯ;
ಅರಿವಿನ ಆಗರ, ಮೆರುಗಿನ ಸಾಗರ,
ಮಕ್ಕಳ ನೆಚ್ಚಿನ ನಿಲಯ.
ವಿಧವಿಧ ವಿದ್ಯೆ, ಕೌಶಲ ಗಳಿಸಿ
ಬೆಳೆಯಲು ಸುಂದರ ತಾಣ;
ಉಜ್ವಲ ಜೀವನ ರೂಪಿಸಿಕೊಳ್ಳಲು
ಅನುಗುಣ ಇಲ್ಲಿಯ ಆವರಣ.
ಆಟ - ಪಾಠ, ನಡತೆ - ನಿಯತ್ತು
ಕಲಿಯುತ ಕೀರ್ತಿಯ ಪಡೆಯೋಣ;
ಗುರುಗಳ ಮಾತು, ಹಿರಿಯರ ಹೊನ್ನುಡಿ
ಪಾಲಿಸಿ ಮುನ್ನಡೆಯೋಣ.
ಇದು ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇಲ್ಲಿಗೆ ದಿನಾಂಕ 31-08-2022ರಂದು ಗಣೇಶ ಚತುರ್ಥಿ ಪ್ರಯುಕ್ತ ಮುಖ್ಯ ಅತಿಥಿಯಾಗಿ ತೆರಳಿದ ಸಂದರ್ಭದಲ್ಲಿ ಸ್ಫುರಿಸಿದ ಆಶುಕವನ.
ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇಲ್ಲಿ ನಡೆದ ವಿದ್ಯಾಗಣಪತಿ ಮಹೋತ್ಸವದಲ್ಲಿ ಧಾರ್ಮಿಕ ಉಪನ್ಯಾಸಕ್ಕಾಗಿ ಅಧ್ಯಾಪಕ ಮಿತ್ರರಾದ ಸಹೃದಯಿ, ಸನ್ಮಾನ್ಯ ಶ್ರೀ ರಾಮಕೃಷ್ಣ ಬಲ್ಲಾಳ್ ಅವರು ಆಹ್ವಾನಿಸಿದ್ದರು. ನನ್ನ ಚಿಂತನೆಗಳಿಗೆ ಧಾರ್ಮಿಕ ಉಪನ್ಯಾಸದ ಚೌಕಟ್ಟು ಒದಗಿಸಿ ಪ್ರೋತ್ಸಾಹಿಸಿದ ಅವರಿಗೂ, ಗೌರವಿಸಿದ ಪ್ರಶಾಂತಿ ಸೇವಾ ಟ್ರಸ್ಟ್‌ನ ಅಧ್ಯಕ್ಷರು, ಉಪಾಧ್ಯಕ್ಷರಾದ ಶ್ರೀ ಪೆಲತ್ತಡ್ಕ ರಾಮಕೃಷ್ಣ ಭಟ್, ಸರ್ವ ಸದಸ್ಯರು, ಪ್ರಶಾಂತಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶ್ರೀ ಅನೂಪ್ ಸರ್, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ, ತಾಂತ್ರಿಕವಾಗಿ ಶ್ರಮಪಟ್ಟು ನಿರ್ವಹಿಸಿದ ಗೌರವಾನ್ವಿತ ಅಧ್ಯಾಪಕ ವೃಂದದವರು ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆಗಳು. ಪ್ರಶಾಂತಿ ವಿದ್ಯಾಕೇಂದ್ರದ ಕ್ಯಾಂಪಸ್ ಪರಿಚಯಮಾಡಿಕೊಟ್ಟ ಗೆಳೆಯರು ಮತ್ತು ಅಧ್ಯಾಪಕರಾದ ಶ್ರೀ ಶಿವಪ್ರಸಾದ್ ಬಿ. ಅವರಿಗೂ, ಹಿರಿಯ ನಿವೃತ್ತ ಸಹೋದ್ಯೋಗಿ ಮಿತ್ರ ಶ್ರೀ ಗೋಪಾಲಕೃಷ್ಣ ಭಟ್ ಅವರ ಮೆಚ್ಚುಗೆಗೂ ಕೃತಜ್ಞತೆಗಳು. ಶಿಸ್ತು - ಸಂಯಮದಿಂದ ವರ್ತಿಸಿರುವ ವಿದ್ಯಾರ್ಥಿಗಳ ಪ್ರೋತ್ಸಾಹ ಅವಿಸ್ಮರಣೀಯ.
✍️ ಶಿವಕುಮಾರ ಸಾಯ,
ಕವಿ, ಸಾಹಿತಿ, ಅಧ್ಯಾಪಕರು.
Comments
Post a Comment