Posts

Showing posts from August, 2024

ಬಹಿರಂತಶ್ಚ ಭೂತಾನಾಂ........

Image
ಬಹಿರಂತಶ್ಚ ಭೂತನಾಮಚರಂ ಚರಮೇವ ಚ | ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ || ಭಗವದ್ಗೀತೆಯ ಕೆಲವು ಸಾಲುಗಳಿವು. ಈ ಶ್ಲೋಕದ ಅರ್ಥ ದೇವರು ಎಂದರೆ ಯಾರು? ಅವನು ಎಲ್ಲಿದ್ದಾನೆ? ಎಂಬ ನಮ್ಮ ಹುಡುಕಾಟಕ್ಕೆ ಉತ್ತರ. " ಅದು ಜೀವಿಗಳ   ಹೊರಗಿದೆ ;  ಒಳಗೂ ಇದೆ ;  ಆದರೂ ಎಲ್ಲೆಡೆ ಚಲಿಸುತ್ತಿದೆ. ಅದು ಅಣುವಿಗಿಂತ ಅಣು ;  ಅದಕೆಂದೆ   ತಿಳಿವಿಗೆಟುಕದ್ದು. ಅದು ದೂರದಲ್ಲಿದ್ದರೂ ಎಲ್ಲರ ಹತ್ತಿರದಲ್ಲಿದೆ. " ಇದು ಸಾರ. ಈಶೋಪನಿಷದ್ ಮಂತ್ರದಲ್ಲಿ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸಿದ ರೀತಿಯಲ್ಲಿಯೇ ಪ್ರಾಯೋಗಿಕವಾಗಿ ದೇವರನ್ನು ವಿವರಿಸುವ ವೈದಿಕ ಮಂತ್ರವಿದೆ: "ತದ್ ಅಂತರ ಅಸ್ಯ ಸರ್ವಸ್ಯ ತದ್ ಸರ್ವಸ್ಯ ಬಾಹ್ಯಃ" - ಅಂದರೆ, "ಅವನು ಎಲ್ಲದರೊಳಗೆ ಅಸ್ತಿತ್ವದಲ್ಲಿದ್ದಾನೆ, ಆದರೆ ಅವನು ಎಲ್ಲದರ ಹೊರಗಿದ್ದಾನೆ." ನಾವು ಭಗವಂತನಂತೆ ಆಗುವುದಕ್ಕೆ ಸಾಧ್ಯವಾ? ಕೀಳರಿಮೆ ಮತ್ತು ಮೇಲರಿಮೆ ಎರಡರಿಂದಲೂ ಅದು ಸಾಧ್ಯವಿಲ್ಲ. ಆದರೆ, ಸಾಧ್ಯವಿದೆ - ನಮ್ಮ ಶಕ್ತಿಯನ್ನು ನಮ್ಮ ಒಳಹೊರಗು ಇರುವ ಸರ್ವ ಭೂತಗಳಲ್ಲೂ ಕಂಡುಕೊಳ್ಳುವ ಮೂಲಕ ಮಾತ್ರ. ಆ ಶಕ್ತಿ ಸರ್ವಾಂತರ್ಯಾಮಿ. ಅಂದರೆ, ಯಾರೂ ಮೇಲೂ ಅಲ್ಲ. ಯಾರೂ ಕೀಳೂ ಅಲ್ಲ. ನೀವು - ನಾವು ನಮ್ಮ ನಮ್ಮ ಆಳಕ್ಕಿಳಿದು ಪ್ರಶ್ನಿಸಿಕೊಳ್ಳಬೇಕು. ನಮ್ಮ ಊಹೆಗೆ ನಿಲುಕದ, ನಾವು ಕಾಣದ ಹಲವಾರು ವಿಚಾರಗಳು ನಮ್ಮೆಲ್ಲರನ್ನೂ ಬದುಕಿಸುತ್ತಲೇ ಇರುತ್ತವೆ.

ಹಣಕಾಸು ನಿರ್ವಹಣೆ ಹೇಗಿರಬೇಕು?

Image
ಸಾಮಾನ್ಯ ಜನರಿಗೆ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೇಗೆ ಉಳಿಸಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ, ಈ ಲೇಖನದಲ್ಲಿ ನಾನು ಹಣಕಾಸು ನಿರ್ವಹಣೆ ಮತ್ತು ಹೂಡಿಕೆ ಬಗ್ಗೆ ಸಾಕಷ್ಟು ಅಧ್ಯಯನ ಮತ್ತು ಅನುಭವಗಳ ಆಧಾರದಲ್ಲಿ ಪ್ರೀತಿಯಿಂದ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಲೇಖನ ತಮಗೆ ಇಷ್ಟವಾದರೆ ಒಂದು ಲೈಕ್, ಕಮೆಂಟ್ ಅಥವಾ ಮೆಸೇಜ್ ಬಾಕ್ಸಿನಲ್ಲಿ ಮೆಚ್ಚುಗೆಯನ್ನು ತಿಳಿಸಿ. ಹಣದುಬ್ಬರ ಎಂಬ ಪದವನ್ನು ನೀವು ಕೇಳಿರಬಹುದು. ಏನಿದು ಹಣದುಬ್ಬರ? ನಮ್ಮ ಕರೆನ್ಸಿ ಪ್ರತಿವರ್ಷ ಅಪಮೌಲ್ಯಕ್ಕೆ ಒಳಗಾಗುತ್ತಲೇ ಇರುತ್ತದೆ. ಹಣದುಬ್ಬರದಿಂದಾಗಿ ಅದರ ಕೊಳ್ಳುವ ಸಾಮರ್ಥ್ಯ(Purchasing power) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತದೆ. ಪ್ರಸ್ತುತ ಭಾರತದಲ್ಲಿ ಈ ಹಣದುಬ್ಬರದ ದರ 6-7% ಸುಮಾರಿಗೆ ಇದೆ. ಅಂದರೆ, ವರ್ಷದಿಂದ ವರ್ಷಕ್ಕೆ ಹಣದ ಮೌಲ್ಯ ಅಷ್ಟು ಕುಸಿದಿರುತ್ತದೆ ಎಂದರ್ಥ. ಹಾಗಾಗಿ, ನಮ್ಮಲ್ಲಿರುವ ಹಣವು ಈ ಹಣದುಬ್ಬರವನ್ನು ಮೀರಿ ಬೆಳೆಯಬೇಕು. ಹಾಗಿದ್ದರೆ ಮಾತ್ರ ಅದು ಹೂಡಿಕೆಯಾಗುತ್ತದೆ. ಷೇರು ಮಾರುಕಟ್ಟೆಯು ನಿಮ್ಮ ಹಣ ಉತ್ಕೃಷ್ಟ ರೀತಿಯಲ್ಲಿ ಬೆಳೆಯಲು ನೀವು ನೀಡಬಹುದಾದ ಅವಕಾಶವಾಗಿದೆ. ಷೇರುಗಳ ಮೂಲಕ ಅಥವಾ ಇಂಡೆಕ್ಸ್ ಫಂಡ್‌ಗಳ ಮೂಲಕ ದೀರ್ಘ ಅವಧಿಗೆ ನಿಮ್ಮ ಉಳಿತಾಯದ ಒಂದು ಭಾಗವನ್ನು ಹೂಡಿಕೆ ಮಾಡಲು ಪ್ರಯತ್ನಿಸಬಹುದು. ಇದಕ್ಕಾಗಿ ವಿವಿಧ ಎಸೆಟ್ ಮೇನೇಜ್‌ಮೆಂಟ್ ಕಂಪ