ಚೆಲುವು

ಗುಣಕ್ಕೆ ಗುಣ ಪ್ರಾಪ್ತಿಯ
ಪ್ರಪಂಚದಲ್ಲಿ
ನಿನ್ನ ವಿಶ್ವಾಧಾರ
ಬೃಹತ್ತು!

ಬಯಕೆ, ಈಡೇರಿಕೆ;
ಆಕಾಶ, ಭೂಮಿ, ಪಾತಾಳ, ಅನಂತಾನಂತ ಅಷ್ಟೂ
ಇಷ್ಟಕ್ಕಿಳಿಸಿ,
ನಿನ್ನ ಮಟ್ಟ, ಆಕಾರ ಬೆಳೆಸಿ
ಆನಂದ ಮೆರೆಸಿದೆ.

ಹೊರ ಎಂಬುದಿಲ್ಲ-
ಒಳಗಣ ಜೀವಕಳೆ ತುಂಬಿದೆ;
ಗುಣಕ್ಕೆ ಗುಣ ಬೆರೆತು, ದೊರೆತು,
ಒಳ-ಹೊರಗು ಮಧ್ಯೆ ಬೆಡಗು-ಬೆರಗು
ತೆರೆಯುತಿದೆ;
ನಿನ್ನ ಜ್ಞಾನ, ವಿಜ್ಞಾನ, ತತ್ತ್ವಜ್ಞಾನ
ಬೆಳಗುತಿದೆ;
ಶಾಂತಿ ಮೊಳಗುತಿದೆ.

ಪಿಂಡಾಂಡದಿಂದ ಬ್ರಹ್ಮಾಂಡ ವರೆಗೂ
ಹಿಗ್ಗು;
ಹಿರಿತನ, ಜವನಿಕೆ.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್