ಸ್ಫೂರ್ತಿ

ಇಂದು ಹೊಸತು, ಈಗ ಹೊಸತು
ಹೊಂದು ಹೊಚ್ಚಹೊಸತು;
ಹಿಂದು-ಮುಂದು ಎರಡು ಇರದ
ಅಂದದರಿವೆ ಹೊಸತು.

ಪಕ್ವ ಭಾವ, ಒಳಗೆ ಜೀವ
ಪ್ರಾಣಶಕ್ತಿ-ನಿಲುಮೆ;
ಸ್ವಾಭಿಮಾನ-ಸೊಗಸು-ಹಿರಿಮೆ
ಅಂತರಾಳ, ಚಿಲುಮೆ!

ಸ್ವರದ ತಂತ್ರ, ಮಂತ್ರ ಸೆಳೆತ
ವಿದ್ಯೆ, ನವವಿಚಾರ;
ನಡೆಯು ನೇರ, ನುಡಿಯು ಮಧುರ
ಇದುವೆ ಜಯವಿಹಾರ!

ನಿನಗೆ ನೀನೆ ಸೂತ್ರಧಾರ
ನೀನೆ ಪಾತ್ರಧಾರ;
ಮುಕ್ತ ನೀನು, ಶಕ್ತ ನೀನು
ಚೆಲುವ ಚಿತ್ರಗಾರ!

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ

🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019