ಸುವರ್ಣ ಸಂಭ್ರಮ
ಇದು ಸುವರ್ಣ ಸಂಭ್ರಮ
ಹಾಡೋಣ ಸರಿಗಮ
ನೋಡಿರಣ್ಣ ಚಂದ
ನಮ್ಮ ಶಾಲೆಯಂದ
ಕೊಂಡಾಡಿ ಕೀರ್ತಿ
ತುಂಬೋಣ ಸ್ಫೂರ್ತಿ
ಈ ಬಯಲು ಅಂಗಣ
ನಲಿದು ಕಲಿವ ರಿಂಗಣ
ಪಾಠ ವಿಷಯ ಜ್ಞಾನ
ಹೊಸ ತಂತ್ರಜ್ಞಾನ
ತೊಲಗಿಸಿ ಅಜ್ಞಾನ
ತೋರಿತು ಸುಜ್ಞಾನ
ಮೆರೆದಾಟವ ನೋಡು
ಮೆರವಣಿಗೆ ಮಾಡು
ನಮ್ಮ ಶಾಲೆಯೊಡಲು
ಪ್ರಕೃತಿಯ ಮಡಿಲು
ವಿದ್ಯೆಯ ಸಂಪತ್ತು
ಸದ್ಬುದ್ಧಿಯನಿತ್ತು
ಕಾಪಾಡಿದ ಶಾಲೆಯೇ
ಏನು ನಿನ್ನ ಲೀಲೆ!
ಶಾಲೆಗೆ ಐವತ್ತು
ತುಂಬಿದ ಈ ಹೊತ್ತು
ಸ್ವಾಗತಿಸಿದೆ ತೋರಣ
ಆನಂದದ ಪ್ರೇರಣ
-ಶಿವಕುಮಾರ ಸಾಯ
(೧೨.೧೨.೨೦೧೫ರಂದು ಜರಗಿದ ಶಾಲಾ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಅಭಿನಯಿಸಲ್ಪಟ್ಟ ಗೀತೆ.)
Comments
Post a Comment