ಬೆಳಕು
ಜ್ಞಾನದ ಜ್ಯೋತಿಯ ಬೆಳಗೋಣ
ಅಜ್ಞಾನದ ಕೊಳೆ ತೊಳೆಯೋಣ
ಸುಜ್ಞಾನದ ವರ ಪಡೆಯೋಣ
ವಿಜ್ಞಾನದ ಜೊತೆ ನಡೆಯೋಣ
ನಿತ್ಯವಸಂತದ ಹಚ್ಚನೆ ಹಸುರಿನ
ಹೊಸ ಹಾಡುಗಳನು ಹಾಡೋಣ
ವಿದ್ಯೆ ಬುದ್ಧಿಯಲಿ, ಸದ್ಭಾವನೆಯಲಿ
ಸಾರ್ಥಕ ಬಗೆಯಲಿ ಬದುಕೋಣ
ಒಡಲಲಿ ಶಕ್ತಿಯ ಪ್ರೇರಣೆಗೊಳಿಸಿ
ಸ್ಫೂರ್ತಿಯ ತತ್ವವ ಬಿತ್ತೋಣ
ಎಲ್ಲರ ಮನದಲಿ ನಾಳಿನ ಕನಸಿನ
ಬಣ್ಣದ ಕಲ್ಪನೆ ಬೆಳೆಸೋಣ
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment