ಧ್ರುವ

ಧ್ರುವಕ್ಕೆ ಇಲ್ಲೇ
ಕೇಂದ್ರಸ್ಥಾನ;
ತನ್ನೊಳಗೆ ತಾನೆ
ರಾಜಧಾನಿಯಂತೆ
ಒಂದು ಆಸ್ಥಾನ

ಸ್ನೇಹಕ್ಕೆ ವಲಯ,
ಪ್ರಶಾಂತ ನಿಲಯ,
ದೇವಾಲಯ-
ಸ್ವಯಂ ಭು!

ತಾನೇ ತಾನಾಗಿ
ಶಕ್ತಿ ಸಂಚಯನ,
ಸಂಚಲನ, ಸಂಚಾರ,
ಧ್ರುವೀಕರಣ....

'ಧ್ರುವರಾಜ'ನಿಗೆ
ದೇಹ ರಾಜಸ್ಥಾನ;
ದೇಶ-ಕಾಲಾತೀತ
ಕಾರಸ್ಥಾನ...

ತನ್ನೊಳಗೆ ಆಕಾಶ ಬೆಳೆದು,
ನಕ್ಷತ್ರ, ನಂದಾದೀಪ ಹೊಳೆದು
ತತ್ತ್ವ ತಿಳಿದದ್ದಕ್ಕೆ
ಧನ್ಯ

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್