ಪ್ರಕೃತಿ
ನೀ ದೇಹಾಭಿಮಾನಿಯಾಗಿರು;
ಒಂದು ಅಸ್ತಿತ್ವ, ಕಾಸ್ಮಾಲಜಿ,
ಫೆಂಗ್ ಶುಯಿ, ತಪಸ್ಸು ಮತ್ತು ತಂತ್ರ
ನಿನ್ನದೇ.
ನಿನ್ನೊಳಗೆ ನೀನಿರು;
ಕಾಂತಿ ಮಿನುಗುವುದು,
ವಿನಂತಿ
ಜರಗುವುದು.
"ಕಠಿಣ ಪರೀಕ್ಷೆಗಳೇ
ತಾಲೀಮು;
ಸರಳವಾದದ್ದೇ
ಅಂತಿಮ-"
ಕಲ್ಪದಲ್ಲೀಗ
ಅವಸರ್ಪಿಣಿಯೇ ಇಲ್ಲವಾಗುವುದು;
ನಿನ್ನ ಉತ್ಸರ್ಪಿಣಿ ಮಾತ್ರ
ಒಡನೆ ಬೆಳೆಯುವುದು;
ಉಳಿಯುವುದು.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment