ಮೌನ ಮುರಿದ ಸಿಂಹ
ಗವಿಯಲ್ಲಿನ ಸಿಂಹದ್ದು
ರಾಜಾರೋಷ--
ಈ ದಿನ ಸಿಂಹಕ್ಕೆ ಬಂತು ಆವೇಶ;
ಅದು ತನ್ನ ಮೌನ ಮುರಿದಿದೆ.
ಶಂಕೆಯಿಲ್ಲ--
ಸಿಂಹ ಯಾವತ್ತೂ
ಮರ್ಯಾದೆಯ
ಗದ್ದುಗೆಯಲ್ಲಿರುತ್ತದೆ;
ಮಹಲಿನ ಅಮಲಿನಲ್ಲಲ್ಲ.
ತಾನು
ಯಾವುದನ್ನು ಮಾಡಬೇಕೋ
ಅದನ್ನೇ ಮಾಡುವುದು,
ಯಾವುದನ್ನು ಆಡಬೇಕೋ
ಅದನ್ನೇ ಆಡುವುದು,
ಯಾವುದನ್ನು ತಿನ್ನಬೇಕೋ
ಅದನ್ನೇ ತಿನ್ನುವುದು
ಸಿಂಹ!
ಸಿಂಹ ಸ್ಥಿತಪ್ರಜ್ಞ;
ಮಂತ್ರಿ-ಮಹೋದಯರಿಗೆ
ಕರೆ ಮಾಡಿ
ಶತ್ರುಗಳನ್ನು ಕೆಣಕಿ ಕಾಡಿದರೆ
ಸಿಂಹಕ್ಕೆ
ಅದೂ ಪುರುಷತ್ವವೇ.
ಬಹುಪರಾಕ್!
ಯಾವ ಮನುಷ್ಯ ಕೂಡ
ಸಿಂಹಕ್ಕೆ ಎದುರಾಗಲಾರ;
ಏಕೆಂದರೆ,
ಸಿಂಹದ ಎದುರು
ಎಂತಹ ಮನುಷ್ಯನಿದ್ದರೂ
ಮಂಗಕ್ಕೇ ಸಮಾನ!
✍️ಶಿವಕುಮಾರ ಸಾಯ 'ಅಭಿಜಿತ್'
Comments
Post a Comment