ಯಶಸ್ವೀ ಜೀನಿಯಸ್‌ಗಳು ಅದೃಷ್ಟವಂತರೂ ಆಗಿರುತ್ತಾರೆ ಯಾಕೆ??!
ವ್ಯಕ್ತಿಯನ್ನು ಜೀನಿಯಸ್ ಅನ್ನಬೇಕಾದರೆ ಆತ ಕೇವಲ ಬುದ್ಧಿವಂತನಾದರಷ್ಟೇ ಸಾಲುವುದಿಲ್ಲ. ಅವನಲ್ಲಿ ಹೆಜ್ಜೆ-ಹೆಜ್ಜೆಗೆ ಅಡೆತಡೆ ಹಾಗೂ ಅದನ್ನು ಪಾರುಗೈಯುವ ಅಧಿಕ ಪ್ರಮಾಣದ ಗೆಲುವಿನ ಅಂಶ ಇರಲೇಬೇಕಾಗುತ್ತದೆ. ಆದುದರಿಂದ ಒಬ್ಬ ಜೀನಿಯಸ್ ಪ್ರಸಿದ್ಧನೂ ಯಶಸ್ವಿಯೂ ಆಗಿರುತ್ತಾನೆಂದರೆ ಅವನಲ್ಲಿ ಗೆಲುವಿನ ಅಂಶ ಅತ್ಯಧಿಕವಾಗಿದೆ ಎಂದೇ ಅರ್ಥ.
ಅದೃಷ್ಟವಂತ ಜೀನಿಯಸ್‌ಗಳಿಗೆ ಉದಾಹರಣೆ ಐನ್‌ಸ್ಟೈನ್, ಸ್ಟೀಫನ್ ಹಾಕಿಂಗ್ ಮುಂತಾದ ಅತಿ ಯಶಸ್ವೀ ವಿಜ್ಞಾನಿಗಳು. ನಮ್ಮಲ್ಲಿ ಸಾಹಿತ್ಯದಲ್ಲೂ ಕುವೆಂಪು, ಠಾಗೋರ್ ಅವರನ್ನು ಜೀನಿಯಸ್ ಎಂದು ಕರೆದಿದ್ದಾರೆ. ವ್ಯಕ್ತಿ ಆತನ ಪ್ರಯೋಗಗಳಲ್ಲಿ ಯಶಸ್ವಿಯಾಗಿರುತ್ತಾ ಅದರ ಸಂಪೂರ್ಣ ಪ್ರಸಿದ್ಧಿ ಆತನಿಗೆ ಸಂದರೆ ಮಾತ್ರ ಆತನನ್ನು ಸಾಕಷ್ಟು ಅದೃಷ್ಟವಂತ ಜೀನಿಯಸ್ ಎಂದು ಹೇಳಬಹುದು. ಇತ್ತೀಚಿನ ಕವಿಗಳಲ್ಲಿ ಸಾಹಿತ್ಯದ ಪ್ರಮಾಣ ಮತ್ತು ಯಶಸ್ಸು ಎರಡನ್ನೂ ಗಮನಿಸಿ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರನ್ನು ಅತ್ಯುತ್ತಮ ಉದಾಹರಣೆಯಾಗಿ ಸ್ವೀಕರಿಸಬಹುದು.
⏺️ಯಶಸ್ವೀ ಜೀನಿಯಸ್‌ಗಳ ಲಕ್ಷಣಗಳು
"It is immaterial to me whether I run my machine in my mind or test it in my shop" ಎಂದು ನಿಕೊಲಾ ಟೆಸ್ಲಾ ಹೇಳಿದ್ದಾರೆ. ಜೀನಿಯಸ್‌ಗಳು ಪ್ರಯೋಗ ಮಾಡುವುದು ಉತ್ತರಗಳ ಪ್ರಸ್ತುತಿಗಾಗಿ ಅಷ್ಟೇ. ಆತನ ಗೆಲುವು ಆತನ ಒಳಗಿರುತ್ತದೆ ಹಾಗೂ ಪ್ರಯೋಗಾಲಯದಲ್ಲಿ ಅದು ಜಾಗೃತ ರೂಪ ಪಡೆಯುತ್ತದೆ.
ಜೀನಿಯಸ್‌ಗಳಿಗೆ ಆಗಾಗ ಅಡೆತಡೆಗಳು ಎದುರಾಗುತ್ತವೆ. ಅವರು ಸಮಸ್ಯೆಗಳನ್ನು ಪರಿಹರಿಸುವ ವಿಧಾನ ಸಾಮಾನ್ಯ ರೀತಿಯಲ್ಲಿ ಕಂಡುಬರುವುದಿಲ್ಲ. ಅವರು ಅತ್ಯಲ್ಪ ಸಮಯದಿಂದ ತೊಡಗಿ ವರ್ಷಗಳ ತನಕ ಒಂದು ಉತ್ತರಕ್ಕಾಗಿ ಹುಡುಕಾಡಬಹುದು. ಆಶ್ಚರ್ಯವೆಂದರೆ ಇಂತಹ ಸಂದರ್ಭದಲ್ಲಿ ಜೀನಿಯಸ್ ತನಗೆ ಸಂಬಂಧಪಡದ ವಿಷಯಗಳನ್ನು ಕೂಡಾ ತಿರುವಿ ಉತ್ತರಕ್ಕಾಗಿ ತಡಕಾಡುತ್ತಾನೆ ಮತ್ತು ವಿಜ್ಞಾನಿಯಾಗುತ್ತಾನೆ. ಉತ್ತರ ಸಿಗದಿರುವುದರಿಂದ ಉಳಿದವರಿಗಿಂತ ಪೆದ್ದನಂತೆ ಅಸಂಬದ್ಧವಾಗಿ ತೋರುತ್ತಾನೆ. ಈ ಸಮಸ್ಯೆಯ ಬಿಂದುವನ್ನು" T ಆಕಾರದ ಬಿಂದು " ಎನ್ನಲಾಗುತ್ತದೆ. ಅಚಾನಕ್ಕಾಗಿ ಅದೃಷ್ಟವಂತ ಜೀನಿಯಸ್‌ಗೆ ಉತ್ತರ ಹೊಳೆಯುತ್ತದೆ ಆದರೆ ಅದಕ್ಕಾಗಿ ಆತ ತನ್ನ ಜ್ಞಾನವನ್ನು ತಾತ್ಪೂರ್ತಿಕವಾಗಿ ಬಳಸಿಕೊಳ್ಳಬೇಕು. ಆಗ End point ಎಂದು ತೋರುತ್ತಿದ್ದ T point ಈಗ ತಿರುವಾಗಿಬಿಡುತ್ತದೆ! ಇಂತಹ ಹಲವಾರು ಚಿತ್ರ ವಿಚಿತ್ರ T ಬಿಂದುಗಳು ಸಾಮಾನ್ಯವಾಗಿರುತ್ತವೆ. ಆದರೆ ಆ Vantage pointಗಳೇ ಆತ ಎಷ್ಟು ಅದೃಷ್ಟಶಾಲಿ ಎಂಬುದನ್ನು ಒರೆಹಚ್ಚುತ್ತವೆ ಹಾಗೂ ಸಾರುತ್ತವೆ. ಆತ ಹೆಚ್ಚು ವಿವೇಕಿಯೂ ಆಗಿರುತ್ತಾನೆ.
⏪⏪⏪⏪⏺️⏩⏩⏩⏩
ಜಗತ್ತನ್ನೇ ಪರಿವರ್ತಿಸಿದ ಜೀನಿಯಸ್‌ಗಳ ಮುಖ್ಯಗುಣಗಳು:
1. ವ್ಯಾಂಟೇಜ್ ಬಿಂದುವನ್ನು ನೋಡುವುದರಲ್ಲಿ ವಿಷಯದಲ್ಲಿ ಹೊಸ ಬೇರೆಯದೇ ದೃಷ್ಟಿಕೋನ.
2. ವ್ಯಾಂಟೇಜ್ ಬಿಂದುವಿನಲ್ಲಿ ಎಲ್ಲಾ ಅಡೆತಡೆಗಳ ಎದುರು ಕಾರ್ಯಗೈಯುವ ಕ್ಷಮತೆ ಮತ್ತು ಸಾಮರ್ಥ್ಯ.
3. ವಿರೋಧದ ಎದುರಾಳಿತ್ವ ಹಾಗೂ ಕಾರ್ಯದಲ್ಲಿ ಹಟವಾದಿತ್ವ.
4. ಸರಿಹೋಗುವುದಕ್ಕೆ ಸಾಕಷ್ಟು ಅದೃಷ್ಟವಂತಿಕೆ.
ಈ ಅಂಶಗಳೆಲ್ಲವೂ ಇದ್ದಾಗ ಒಬ್ಬ ಜೀನಿಯಸ್ ಯಶಸ್ವೀ ಮತ್ತು ಅದೃಷ್ಟಶಾಲಿ ಆಗಿರುತ್ತಾನೆ.
'Every man and women is a star' - Alester Crowley
🔴🔵ಪಾಸೆಟಿವ್ ಜೀನಿಯಸ್⏺️⏺️
ಜೀನಿಯಸ್‌ಗಳು ತಮ್ಮಲ್ಲಿರುವ ಗೆಲುವಿನ ಅಂಶವನ್ನು ಜಾಗೃತಗೊಳಿಸಲು ಸುಲಭ ತಂತ್ರಗಳು
1. ನೀವು ಆಭಾರಿಯಾಗಿರುವ ಮೂರು ವಿಷಯಗಳನ್ನು ಬರೆದು ಕೃತಜ್ಞರಾಗಿರಿ.
2. ಯಾರಿಗಾದರೂ ಸಾಮಾಜಿಕ ಜಾಲತಾಣದಲ್ಲಿ ಪಾಸೆಟಿವ್ ಸಂದೇಶವೊಂದನ್ನು ರವಾನಿಸಿ.
3. ಎರಡು ನಿಮಿಷ ಧ್ಯಾನಸ್ಥರಾಗಿರಿ.
4. ಹತ್ತು ನಿಮಿಷ ವ್ಯಾಯಾಮ ಮಾಡಿರಿ.
5. ಪುಸ್ತಕದಲ್ಲಿ ಎರಡು ನಿಮಿಷ ಕಳೆದ 24 ಗಂಟೆಗಳ ಅರ್ಥಪೂರ್ಣ ಅನುಭವಗಳನ್ನು ವಿವರಿಸಿ.
"How often we think makes us real".
ಅದೃಷ್ಟಶಾಲಿ ಜೀನಿಯಸ್‌ಗಳು 'T ಬಿಂದು'ವಿನಲ್ಲಿ ಏನೆಲ್ಲ ಮಾಡಬಹುದು?
1. ನಿಮ್ಮ ವೇಗಸ್ ನರವನ್ನು ಚುರುಕಾಗಿಸಿ. ದೀರ್ಘ ಉಸಿರಾಡಿ. ಅದು ಉತ್ತೇಜಿಸುತ್ತದೆ.
2. ನೀವು ಬಿಡಬೇಕಾಗಿದ್ದುದನ್ನು ಒಂದು ಉಸಿರಾಟದಲ್ಲಿ ಹೊರಕಳುಹಿಸಿ. ನಿಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳನ್ನು ಉಸಿರಾಟದಲ್ಲಿ ಹೊರಗೆ ಕಳುಹಿಸಿ. ಹಾಗೂ ನಿಮ್ಮ ನಿಯಂತ್ರಣದಲ್ಲಿ ಇರದಿರುವುದಕ್ಕೆ Okey ಎಂದೇ ಹೇಳಿರಿ.
3. ನೆನಪಿರಲಿ - ಕಾರ್ಯಗಳು ಸಹಜವಾಗಿ Okey ಎಂದು ಪರಿವರ್ತನೆಯಾಗುತ್ತವೆ!
4. ಒತ್ತಡದಿಂದ ಹೊರಬರಲು ತಂತ್ರ ಬಳಸಿ. ಉದಾ:ನಗು.
5. ಇದೂ ಕೂಡಾ ಸರಿಯಲಿದೆ. ಎಲ್ಲಾ ವಿಷಯಗಳು ಕೂಡಾ.
✍️ಶಿವಕುಮಾರ ಸಾಯ 'ಅಭಿಜಿತ್'
⏪⏪⏪⏪⏩⏩⏩⏩⏩
Comments
Post a Comment