ಆರಾಧನೆ

ವಂದನೆ....
ಭಾವದ ಸಂವೇದನೆ...
ರಾಗದ ಸಂಯೋಜನೆ...
ಆರಾಧನೆ....

ಸ್ವರಗಳೆ ನೀನು, ಭರವಸೆ ನೀನು
ಕರುಣೆಯ ಕೃಪೆ ನೀನು
ಕರಗಳು ಹರಸಲಿ, ತೆರೆಗಳು ತೆರೆಯಲಿ
ಗುರು ಚರಣಕೆ ಶರಣು.

ಹಸಿರಿನ ತೋರಣ, ಉಸಿರಿನ ಕಾರಣ
ಜೀವನ ಪಾವನವಿರಲು,
ಗಿರಿಗಳಲ್ಲಿ ಮುಗಿಲಲ್ಲಿ ಮಿಂಚಿನಲಿ
ಬಾನಿನಂಚಿನಲಿ ಹೊನಲು;
ಮಿರುಮಿರುಗುತಿರುವ ಅರಿವಿಂದ ಕಂಗೊಳಿಸಿ
ಹೊಮ್ಮುತಿರುವುದು ಚಿಮ್ಮುತಿರುವುದು
ಹೆಮ್ಮೆ ತರುವುದು ಘಮಲು.

ಹಗಲಿಂದಿರುಳಿಗೆ, ಕೊಳಲಿನ ಕೊರಳಿಗೆ
ಹಾಡಿನ ದನಿಗೆ ಶ್ರುತಿಗೆ
ರಸಧಾರೆಯನು, ಹೊಸಪ್ರೇಮವನು
ತೊಡಿಸಿತು ಮುಡಿಸಿತು ಕೃತಿಗೆ.

ಜನಪ್ರಿಯವಾಯಿತು ಅಭಿವ್ಯಕ್ತಿ
ತನು ಮನ ಧನ ಕಾಯುವ ಶಕ್ತಿ
ಶಾಂತಿಯ ಲೋಕ, ಸ್ವಭಾವೋಕ್ತಿ
ಸಮರ್ಪಣೆಯಾಗುತ್ತಿದೆ ಭಕ್ತಿ.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್