ಸರಳರೇಖೆ

ಸರಳರೇಖೆಯ ಚಿಹ್ನೆ
ಎಷ್ಟೊಂದು ಚೆನ್ನ;
ಅದು ನಿರಂತರಕ್ಕೆ
ಹರಿದು ಸಾಗುವ ಪ್ರಯಾಣ!

ಮಿಲಿಯಾಂತರ ಗ್ಯಾಲಕ್ಸಿಗಳಾಚೆಗೂ
ಇತಿ-ಮಿತಿಯಿಲ್ಲದ ಯಾನ;
ಸೊಗಸಾದ ರೀತಿ, ಗತಿವಿಧಾನ.

ಅವತಾರ-ಆವರ್ತನೆಯಿಲ್ಲ;
ಪ್ರತಿದಿನ ಹೊಸ ಆವೃತ್ತಿ,
ಹೊಸ ಹಾದಿ, ಹೊಸ ನೋಟ,
ಹೊಸ ಓಟ, ಹೊಸ ಪ್ರವೃತ್ತಿ.

ಮೂಢ ಅನಿಸಿಕೆಯಿಲ್ಲ,
ಸಾಮ್ಯತೆಯ ಹುಡುಕಾಟವಿಲ್ಲ,
ಸಂಚಾರ ಮಾತ್ರ;
ನಿತ್ಯ ಯೌವನ
ಸರಳರೇಖೆಯಲ್ಲಿ.

ಕೊನೆ-ಮೊದಲು ತಿಳಿಯದೆ
ಮುಗ್ಧತೆಯಿಂದ
ಕ್ಷಣಕ್ಕೊಮ್ಮೆ ವಿಸ್ಮಯಪಡುತ್ತಾ-
ಸರಳತೆಯ
ಅನುಭವಿಸೋಣ.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್

ಅವಕಾಶ

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ