‘ಒಳಗೊಳ್ಳುವಿಕೆ’ ಹಾಗೆಂದರೇನು?!
‘ಒಳಗೊಳ್ಳುವಿಕೆ’ಯು ಪ್ರಕೃತ, ತಥಾಕಥಿತ ತತ್ತ್ವಗಳಿಗಿಂತ ಮಿಗಿಲಾದ ಒಂದು ತತ್ತ್ವವಿಚಾರವಾಗಿದೆ. ಇದು ಸತ್ಯ ಸ್ವರೂಪದಿಂದ ಉತ್ಪ್ರೇರಿತವಾಗಿದೆ. ಇಲ್ಲಿ ಉತ್ಪ್ರೇಕ್ಷೆಗಳಿಲ್ಲ. ಪ್ರಕೃತಿಸ್ವರೂಪದಲ್ಲಿ ದೇವರು ತನ್ನೆಲ್ಲಾ ಗುಣಗಳ ಸಾರ ಸರ್ವಸ್ವವೇ ಸರಿ. ಇದನ್ನೇ ಸರ್ವಸ್ವರೂಪವೆಂದೂ, ಸಗುಣಬ್ರಹ್ಮವೆಂದೂ ಹೇಳುವರು. ಅದೇ ಬಗೆಯಲ್ಲಿ ನಿರ್ಗುಣ ಬ್ರಹ್ಮವಾದರೋ ಗುಣರಹಿತ, ರೂಪರಹಿತ ಎಂದೂ ಹೇಳಲ್ಪಟ್ಟಿದೆ. ಜೀವಿಯ ರೂಪದಲ್ಲಿ ವ್ಯಕ್ತವಾದಾಗ, ಪ್ರಕೃತಿ ಸ್ವರೂಪವಾಗಿ ತೆರೆದುಕೊಂಡಿದ್ದಾಗ ನೀವು ಸಗುಣಬ್ರಹ್ಮವೇ ಹೊರತು ನಿರ್ಗುಣಬ್ರಹ್ಮವಲ್ಲ. ಪ್ರಕೃತಿಯು ತನ್ನೆಲ್ಲಾ ಗುಣಧರ್ಮವನ್ನು ಅನುಗುಣವಾಗಿ ಹಾಗೂ ಧ್ವನಿಪೂರ್ಣವಾಗಿ ವ್ಯಕ್ತಪಡಿಸುತ್ತಿರಬೇಕು ಮತ್ತು ವ್ಯಕ್ತಪಡಿಸುತ್ತಿರುತ್ತದೆ. ವಾಸ್ತವವಾಗಿ ಎಲ್ಲಾ ಗುಣಗಳು ಎಲ್ಲರ, ಎಲ್ಲವುಗಳ ಜಾತ ಸ್ವರೂಪ ಮತ್ತು ಸ್ವತ್ತು. ಇಲ್ಲಿ ನೆನಪಿಡಬೇಕಾದ ಒಂದೇ ಒಂದು ಶಬ್ದ ‘ಒಳಗೊಳ್ಳುವಿಕೆ’. ದುಷ್ಟಶಿಕ್ಷಣ, ಶಿಷ್ಟರಕ್ಷಣ- ಇದೇ ಸದ್ಧರ್ಮ - ಕರ್ಮ.
✍️ ಶಿವಕುಮಾರ ಸಾಯ ‘ಅಭಿಜಿತ್’
🔴🔵
Comments
Post a Comment