ಘನತೆ
ಕಾಪಾಡು ಕೃಷ್ಣ ಕಾಪಾಡು;
ಕೊಳಲನೂದುತ್ತ ಪಾಡು.
ವ್ಯಾಸರ ಕಾವ್ಯ-
ತಪದ ಸೃಷ್ಟಿ ನೀ,
ರಮಾರಮಣನೆಂದರೂ
ಸರಿಹೋಗುವುದು
ಅವತರಣದಲ್ಲಿ.
ಸಂಸ್ಕೃತದ ಶಕ್ತಿ,
ಯುಗಯುಗದ ಉತ್ಪತ್ತಿ,
ಪರಮ ಧೀ-
ಸಂಕಲ್ಪದ ಸನ್ನಿಧಿ
ಔಂ ಔಂ ಔಂ ನಮಃ!
ಕವಿಗೆ ಕಿವಿಯಾಗಿರುವವನು,
Projection of consciousness
ನೀನು-
ವಿಠ್ಠಲನು.
ಪ್ರಾರ್ಥನೆಗಳು ಫಲಿಸುತ್ತಿವೆ ಗೆಳೆಯನೇ
ಈಗ:
ಅಂದು-ಇಂದಿನ ಒಂದು ನಿಶ್ಶಬ್ದ
ಧ್ಯಾನದ ಕೋರಿಕೆಯಂತೆ ಮಾತ್ರ,
ಅಚಂಚಲವಾಗಿ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment