ಮಹಾಕಾವ್ಯ

ಈ ಪ್ರಕೃತಿ
ಅರ್ಧ ನಾರೀಶ್ವರನಂತೆ;
ಇಲ್ಲೆಲ್ಲೋ
ರಾಮರಾಜ್ಯವಿದೆಯಂತೆ.

ಕಾಪಾಡುವ ಕೃಷ್ಣನೂ,
ಹನುಮನೂ ಇರುತ್ತಾರಂತೆ;
ಅರ್ಜುನನೇ
ಗೆಲ್ಲುತ್ತಾನಂತೆ.

ಹೂವು ಹಾರವಾಗಿ,
ಹಣ್ಣು ಆಹಾರವಾಗಿ
ವೃದ್ಧಿಯಾಗಲಿ;
ಗುಣಕ್ಕೆ ಗುಣ ಸೇರಿ
ಸಮೃದ್ಧಿಯಾಗಲಿ;
ಬೀಜ-ಮಂತ್ರ
ಕುಲಕೋಟಿಯಾಗಿ
ಮಾಗಲಿ; ಬೀಗಲಿ.

ಪ್ರಕೃತಿಯ ಪ್ರಕೃತಿ
ಒಂದು ಪ್ರತಿಮೆ;
ಅದರ ವೈಭವವೇ
ಮಹಾಕಾವ್ಯ.

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್