ಸಂಪರ್ಕಗಳು

ನಿಮ್ಮ ಜೀವನದಲ್ಲಿ ಈ ಮೂರು ಬಗೆಯ ಜನರು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ ಎಂದು ಮನಃಶಾಸ್ತ್ರ ಹೇಳುತ್ತದೆ : People for a reason, People for a season ಹಾಗೂ People for lifetime.
1. People for a reason:
🤼‍♀️🤼‍♂️ ನಿಮ್ಮ ಬದುಕಿನಲ್ಲಿ ಅವಶ್ಯವಿದ್ದ ಯಾವುದೋ ಕಾರಣಕ್ಕಾಗಿ ಸಂಪರ್ಕಕ್ಕೆ ಬಂದವರೇ People for a reason. ಅವರು ಕ್ಲಿಷ್ಟಕರ ಸನ್ನಿವೇಶದಲ್ಲಿ ನೆರವಾಗುತ್ತಾರೆ. ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾರೆ. ಭೌತಿಕ, ಭಾವನಾತ್ಮಕ ಅಥವಾ ಆಧ್ಯಾತ್ಮಿಕ ಸಹಾಯ ಒದಗಿಸುತ್ತಾರೆ. ಆದರೆ ಕಾರಣಗಳು ಇಲ್ಲವಾದಾಗ, ನೀವು ಉದ್ದೇಶಗಳನ್ನು ಈಡೇರಿಸಿಕೊಳ್ಳಬಲ್ಲಷ್ಟಾದಾಗ ಆ ವ್ಯಕ್ತಿಗಳಿಗೆ ಜರೂರತೆಯಿರುವುದಿಲ್ಲ. ಅಂತಹ ಸಂಬಂಧಗಳು ತಾತ್ಕಾಲಿಕವಾಗಿವೆ.‍
2. People for season:
👨‍👧‍👦👨‍👧‍👧👩‍👦👨‍👧 ಕೆಲವು ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಒಂದು ಅವಧಿಯಲ್ಲಿ ಇರುತ್ತಾರೆ. ಉದಾಹರಣೆಗೆ ಬಾಲ್ಯ, ಯೌವನ ಅಥವಾ ವೃದ್ಧಾಪ್ಯದಲ್ಲಿರಬಹುದು. ಅವರೇ people for a season. ಅವರು ನಿಮಗೆ ಶಾಂತಿ, ಸಂತೋಷ, ನಗು, ನೆಮ್ಮದಿ ನೀಡುತ್ತಾರೆ. ಅದನ್ನು ನಂಬಿ. ಆದರೆ ಅವರು ನಿಮ್ಮೊಡನೆ ಶಾಶ್ವತವಾಗಿ ಇರಲಾರರು. ಈ ಸಂಬಂಧಗಳೂ ಕೂಡ ಸಾರ್ವಕಾಲಿಕವಲ್ಲ.
3. People for lifetime:
👩‍❤️‍👨👨‍❤️‍👨👩‍❤️‍👩 ಜೀವನಪೂರ್ತಿಯ ಸಂಬಂಧಿಗಳು ಜೀವನಪೂರ್ತಿ ಜೊತೆಗಾರರಾಗಿದ್ದು ಪಾಠಗಳನ್ನು ಕಲಿಸುತ್ತಲೇ ಅವರು ಜೊತೆಯಲ್ಲಿ ಉಳಿಯುತ್ತಾರೆ. ಬಲಿಷ್ಠ ಭಾವನಾತ್ಮಕ ಬುನಾದಿಯಿಂದ ಅಂತಹ ಬಾಂಧವ್ಯವು ರೂಪಿತವಾಗಿರುತ್ತದೆ. ನಿಮ್ಮ ಕೆಲಸ ನಿರಂತರ ಪಾಠಗಳನ್ನು  ಕಲಿಯುವುದು, ಆ ವ್ಯಕ್ತಿಗಳನ್ನು ಪ್ರೀತಿಸುವುದು ಮತ್ತು ಉಳಿದ ಎಲ್ಲ ಬಗೆಯ ಸಂಬಂಧಗಳಲ್ಲಿ ಕಲಿತ ಪಾಠಗಳನ್ನು ಅಲ್ಲಿ ಅಳವಡಿಸಬಹುದಾದ ಅನುಕೂಲತೆಯಾಗಿರುತ್ತದೆ.
✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್