ಸೃಷ್ಟಿ
ಅಮೃತಮಯ, ಆನಂದಮಯ
ಸೃಷ್ಟಿಯ ದೃಷ್ಟಿಯು ಭವ್ಯಮಯ;
ವಿಶ್ವಮಯ, ವಿಶ್ವಾಸಮಯ
ಬಾಳಿನ ತೋರಣ ದಿವ್ಯಮಯ.
ಬ್ರಹ್ಮಮಯ, ಬ್ರಹ್ಮಾಂಡಮಯ
ಕಲ್ಪಗಳಾಗಲಿ ಪೂರ್ಣಮಯ;
ನಾದಮಯ, ನಿನಾದಮಯ
ಸಂಕಲ್ಪಗಳೇ ವರ್ಣಮಯ.
ಶಾಂತಮಯ, ಪ್ರಶಾಂತಮಯ
ಅನುಭವವಾಗಲಿ ಪ್ರೇಮಮಯ;
ಸ್ವಾದಮಯ, ಆಸ್ವಾದಮಯ
ಸ್ವಾಧೀನತೆಯೇ ಸದ್ಗಮಯ.
ಅಕ್ಷರಮಯ, ಲಕ್ಷಣಮಯ
ಕಾವ್ಯ, ವಿನೋದ, ವಿಜ್ಞಾನಮಯ;
ಅಕ್ಷಯಮಯ, ಅಕ್ಷತಮಯ
ಜೀವನರಂಗ ವಿಶಿಷ್ಟಮಯ.
ಅದ್ಭುತಮಯ, ಆಶ್ಚರ್ಯಮಯ
ಸದಾ ಶಿವನೆ ಸಂತೋಷಮಯ;
ಭಾಗ್ಯಮಯ, ಯೋಗ್ಯಮಯ
ಔಂ ನಮಃ ಅನಂತಮಯ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment