ವಿಕಸನ
ವಿಶ್ವ ವಿನೋದದ ಚಿಲುಮೆ
ಪ್ರಕೃತಿದೇವಿಯ ಹಿರಿಮೆ
ಮಾಯಾ ಮೋಹಕ ಯಾನ
ಬಾಳು ರಸಾಮೃತ ಗಾನ
ಸಾವಿರ ಸಾವಿರ ಕೋಟೆ ಕೊತ್ತಲ
ಬೆಟ್ಟ ಬಯಲು ಸಾಲು
ಜೀವಿ ವಿಕಾಸದ ಸೃಷ್ಟಿ ಪರಂಪರೆ
ಹುಟ್ಟು ಏಳುಬೀಳು
ದೇಶ ವೇಷ ಆಕಾಶ ಕೋಶ
ಬುದ್ಧಿ ಭಾವ ಬಲವು
ಸುಜ್ಞಾನದಿಂದ ವಿಜ್ಞಾನದಿಂದ
ವಿಸ್ತರಿಸುತಿರಲಿ ಅರಿವು
ತಂಗಾಳಿಯಂತೆ ತಿಲ್ಲಾನದಂತೆ
ಹೊಮ್ಮುತಿಹುದು ನಲಿವು
ಶಿವಕರುಣೆಯಿಂದ ಜಗ ತೋರುತಿಹುದು
ದಿನದಿನವು ಹೊಸತು ಚೆಲುವು
✍️ಶಿವಕುಮಾರ ಸಾಯ 'ಅಭಿಜಿತ್'
Comments
Post a Comment