ಈಗ ಗೆದ್ದವನು
ಹೊರಬಿದ್ದ ಪದಗಳು
ಕವಿತೆಯಾದರೆ,
ಒಳಗಿನ ಪದಗಳು
ಧ್ಯಾನವೇ ಆದವು.
ಪದಗಳ ವಿಜ್ಞಾನದಲ್ಲಿ
ನಿರ್ಮಿತಿ;
ಜೀವನ ಉತ್ಪ್ರೇಕ್ಷೆಯಂತೆ
ನಡೆಯುತ್ತಿದೆ.
ಒಳಗೊಬ್ಬ ಬೆಳಗುತ್ತಾನೆ
ಬೆಳಕಿನ ವಿಜ್ಞಾನಿ ಕುಣಿಯುತ್ತಾನೆ
ಈಗ ಗೆದ್ದವನು
ಟ್ರಿಪಲ್ ವರ್ಡ್ಸ್ ಬರೆಯುತ್ತಾನೆ
ಸ-ಪ-ಸ ಹಾಡುತ್ತಾನೆ
ಸಂಕಲ್ಪದಿಂದ ಸೃಷ್ಟಿಸುತ್ತಾನೆ.
ಈ ಕಾಸ್ಮಸ್ ಅತ್ಯದ್ಭುತ,
ಇದರೊಳಗೆ ಸರ್ವಸ್ವ;
ಆಮೇಲೆ ಟೆಲಿಪತಿ, ಶಬ್ದವಿದ್ಯೆ,
ಗುರುತ್ವ, ವಿದ್ಯುತ್ಕಾಂತೀಯ ಅಲೆ,
ಕನಸು, ಮಹಾಭಾರತ, ಜೆನೆಟಿಕ್ಸ್ ಇತ್ಯಾದಿ.
ಈಗ ಗೆದ್ದವನು
ಕವಿಯಲ್ಲ-ಕಲ್ಕಿ,
ಗಾರುಡಿಗನು;
ಲೋಕಗಳು ಶಾಂತಿಯಿಂದ
ಬಾಳುತ್ತಿವೆ.
ನನ್ನೊಳಗಿನ ನಾನು,
ಈಗ ನಿಗೂಢವಲ್ಲ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment