ಮನಸ್ಸೆಂಬ ಆಕಾಶವು
ಮನಸ್ಸೆಂಬ ಆಕಾಶವೂ ಅಪಾರ;
ಇಲ್ಲೂ ಹಗಲಿರುಳೆನ್ನದೆ
ನಕ್ಷತ್ರಗಳು ಹೊಳೆಯುತ್ತವೆ.
ವಿಶ್ವವೆಂದರೆ
ಹಲವು ಅಗಾಧಗಳ ಕಲ್ಪನೆ,
ಅಸೀಮ, ಅಪರಿಮಿತ ಪ್ರತೀತಿ,
ಬಹುತ್ವ ಅಥವಾ
ಜೀವಂತ ಪರಿಕಲ್ಪನೆ.
ಭೂತ-ಭವಿಷ್ಯಗಳಿಲ್ಲದ
ನಿಶ್ಚಲ ವರ್ತಮಾನ
ನಿನ್ನ ದೇಶ-ಕಾಲ;
ಅದು-ಇದು ಇರದ ಅಭೇದ
ಸ್ವಯಂಪೂರ್ಣತೆ, ಪರಿಪೂರ್ಣತೆ,
ಅಲಂಕಾರ ರಹಿತ
ಸ್ಥಿರ ಸ್ಥಿತಿ.
ನಿನ್ನೊಳಗೆ
ಕೇವಲವಲ್ಲದ ಈ ಜಗತ್ತೂ
ಮೀರಿ ಬೆಳೆದು
ಇನ್ನೂ ಇದೆ
ಎನ್ನುವಂತೆ
ಬಾಳುತ್ತಿರು,
ಜೀವನ ನಿನ್ನ ವಿಶಾಲತೆ;
ಪ್ರಪಂಚ ಚಲಿಸುತ್ತಿದೆ
ತನ್ನ ವಿಸ್ತಾರಕ್ಕೆ.
-ಶಿವಕುಮಾರ ಸಾಯ 'ಅಭಿಜಿತ್'
🎆🎆🎆🎆🎆🎆🎆🎆
Comments
Post a Comment