ದಿವ್ಯತೆ

ಗಾಳಿ ಬೀಸಿ, ಮಳೆಯಲ್ಲಿ ಮಿಂದು
ಪುಳಕ ಮೈದುಂಬಿದಾಗ
ನೆಲದಲ್ಲಿ ಫಲ ಬೆಳೆದ ಕಳೆ-
ಇಳೆಯ ಸೋಜಿಗ.

ಬಯಲು ವಿಶಾಲವಾಗಿ
ಇನ್ನೂ
ಅಗಾಧ;
ಆಕಾಶದಂತೆ ಭರವಸೆ.

ಹೆಜ್ಜೆ-ಹೆಜ್ಜೆಗೊಂದು ಸಪ್ಪಳ,
ಹೊಸ ಶಬ್ದ;
ಪವಿತ್ರ
ಮೆರವಣಿಗೆ.

ಹಣ್ಣು-ಹೂವುಗಳಲ್ಲಿ
ಅರಳಿದ ಕಣ್ಣು;
ಸೃಷ್ಟಿಯ ಸಡಗರಕ್ಕೆ
ದಿವ್ಯತೆಯ
ರಂಗು.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್

ಅವಕಾಶ

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ