ದರ್ಶನ
ಎಚ್ಚೆತ್ತಾಗ
ಸುತ್ತಮುತ್ತ ಪವಾಡ;
ನಿರಂತರ ಕಾಳಜಿಯ
ಕಳಶವಿಟ್ಟರು
ಅಂತರಂಗದ
ದೇವ-ದೇವಿಯರು!
ಅಚ್ಚರಿ,
ಯಾರು ಪ್ರಜ್ಞೆ ತೋರಿದರು,
ಮುಕ್ತಿಯ ದೃಷ್ಟಿ
ದೊರಕಿಸಿದರು
ನೋಡು
ದೀಪೋತ್ಸವದ ಜ್ಯೋತಿ-
ಜಾಗೃತಿಯ ದರ್ಶನ;
ಸ್ವಾತಂತ್ರ್ಯ-ಸ್ವರ್ಗ,
ಹಾಡು
'ವಿ' ಎಂಬ ಉಪಸರ್ಗ!
ಫಲಿತ ವಿನ್ಯಾಸ
ಕೈಚಳಕ;
ಮೆರೆಸಿ, ಮೇಳೈಸಿ ಪುಳಕ
ಹೊಮ್ಮಿಸಿತು ಹೊಂಬೆಳಕ!!
✍️ಶಿವಕುಮಾರ ಸಾಯ 'ಅಭಿಜಿತ್'
Comments
Post a Comment