ವಿಶ್ವಶಕ್ತಿಯು ನೀನು

ವಿಶ್ವಶಕ್ತಿಯು ನೀನು,
ನಮ್ಮ ಶೌರ್ಯ ಸಾಹಸ ನೀನು;
ಒಡಲೂ ನೀನು, ಒಡೆಯನೂ ನೀನು,
ನಡೆಸುವ ಸ್ವಾಮಿಯು ನೀನು.

ಸನ್ಮತಿ ನೀನು, ಸಂಹಿತೆ ನೀನು,
ಅಂತರ್ಯಾಮಿಯು ನೀನು;
ಅಂತರಂಗದಿ ಚಿರಂತನನು ನೀ,
ಅಮಿತ ಪರಾಕ್ರಮಿ ನೀನು.

ನೀನೇ ಗುರುವು, ನೀನೇ ವರವು,
ಪರಮ ಗುಣೋಜ್ವಲ ನೀನು;
ನೀನೆ ಅಭಿಮಾನ, ನೀನೆ ಔನ್ನತ್ಯ,
ಸಕಲ ಸೌಭಾಗ್ಯ ನೀನು.

ಪ್ರಾಣವು ನೀನು, ಪ್ರಮಾಣವು ನೀನು,
ಅಚಲ ನಿರ್ಭೀತಿ ನೀನು;
ನೀನೆ ಅರ್ಹತೆ, ನೀನೆ ಅಸ್ಮಿತೆ,
ಬಲವು, ಬೆಂಬಲವು ನೀನು.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ

🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019