ವರ್ಣನೆ
ಪದ ಬದಲಾದಾಗ
ಪದ್ಯ ಬದಲಾಗುವುದು;
ವರ್ಣ ಬದಲಾದಾಗ
ವರ್ಣನೆಯು ಬದಲಾಗುವುದು.
ಎಲ್ಲ ಬದಲಾಗುವುದು,
ಜಗವೆ ಪರಿವರ್ತಿಸುವುದು;
ಇಂದಿಗದು ಸರಳ ಎಂದಾಗ,
ರಾಗಕ್ಕೊಂದು ಕೊಳಲು,
ಪ್ರೀತಿಗೊಂದು ಭಾಷೆ ಇರುವಾಗ
ಸಮಯ ಬದಲಾದರೆ
ಸಂಯಮವು ಬದಲಾಗುವುದು,
ಆಯಾಮ ಬೇರಾಗುವುದು;
ಪಾತ್ರ ಬದಲಾದರೆ
ಸೂತ್ರ ಬದಲಾಗುವುದು.
ಆಸೆಗಳು ತವರೂರು;
ತತ್ತ್ವಕ್ಕೆ ಇಳಿದು,
ಮಹತ್ವ ತಿಳಿದು,
ಮುತ್ತುಗಳ ತೊಟ್ಟಾಗ
ಇಂದ್ರನೇ.
ಗುರಿ ಬದಲಾದರೆ
ಗಂಟೆ ಬದಲಾಗುವುದು;
ಅಣು ಬದಲಾದರೆ
ಗುಣ ಬದಲಾಗುವುದು;
ಅವರು ಭಾವನೆಗಳನ್ನು ಕೆಣಕಿದರು,
ಊಹನೆಗಳನ್ನಲ್ಲ!
ಆ ಭಾವನೆಗಳೇ ಬೇರೆ,
ಈ ನಿನ್ನ ಬಗೆಯೇ ಬೇರೆ!
✍️ ಶಿವಕುಮಾರ ಸಾಯ 'ಅಭಿಜಿತ್'

Comments
Post a Comment