ಹೇ ಗುರುವೆ...
ಹೇ ಗುರುವೆ, ಓ ಚಿರವೆ,
ಅಖಂಡ ಮಂಡಲ ವಿಭುವೇ...
ನಿರ್ವಿಕಾರಿ, ಲೋಕ ವಿಹಾರಿ,
ಪ್ರಚಂಡ ರೂಪಿ ಪ್ರಭುವೇ....
ಆದರದಲಿ ನಮ್ಮ ಹರಸು
ಹೇ ದೇವ, ನೀ ಲಾಲಿಸು
ಎಮ್ಮ ಪ್ರೇಮದಿ ಪಾಲಿಸು llಹೇ ಗುರುವೆ.. ll
ಅಳಿಯದ ವಿದ್ಯೆಯ ಕಲಿಸಿ, ಬೆಳೆಯುವ ಪದ್ಧತಿ ತಿಳಿಸಿ,
ಜ್ಞಾನದ ದಾರಿಯ ತೋರಿ, ಬೆಳ್ಳಿಯ ಕಿರಣವ ಬೀರಿ;
ಅನುಭವದಮೃತ ನೀಡಿ, ಬುದ್ಧಿಯ ತಿದ್ದಿ ತೀಡಿ,
ಹೆಗ್ಗಳಿಕೆಯನು ಸಲಿಸಿ, ಜಗ್ಗದ ತೆರದಲಿ ಗೆಲಿಸಿ llಆದರದಲಿ.. ll ಹೇ ಗುರುವೆ.. ll
ಭಕ್ತಿಯ ಜಪವನು ನಡೆಸಿ, ಮೌನದ ತಪ ಆಚರಿಸಿ,
ಸಾಧನ ಶಿಖರವನೇರಿ, ಬಾರಿಸೆ ವಿಜಯದ ಭೇರಿ llಆದರದಲಿ.. ll ಹೇ ಗುರುವೆ... ll
✍️ಶಿವಕುಮಾರ ಸಾಯ 'ಅಭಿಜಿತ್'
🔴🔵
Comments
Post a Comment