ಸ್ಪಂದನೆ
ಮಗುವಿಗೆ
ಮಲಗುವ ಮಂಚದಂತಿರುವ
ತೊಟ್ಟಿಲಿನ ಕೊನೆಯ ಅಂಚುಗಳ ಮೇಲೆ
ಮೊದಲ ಪ್ರೀತಿ;
ಬಾಲಪಾದಗಳಲ್ಲಿ ಮೆಲ್ಲನೇ ಅದು
ಹಾಸಿಗೆಯನೊದೆಯುತ್ತದೆ.
ಹೊದೆದು ಮಲಗಿದ್ದಾಗ
ದಾದಿಯೋ ಅಥವಾ ಇನ್ಯಾರೋ
ಮಗುವನ್ನು ನೋಡಿ ಹೋಗುತ್ತಾರೆ;
ಅದರ ಅಂಗಾಲುಗಳ ಚುಂಬಿಸಿ
ಪ್ರೀತಿಯಲಿ ಸ್ಪರ್ಶಿಸುತ್ತಾರೆ.
ಅಂಗಾಲುಗಳಿಗೆ ಗೊತ್ತಿರಬಹುದು,
ಅವು ಮಾತಾಡಲಾರವು;
ಕಣ್ಣುಗಳಿಗೆ ತಿಳಿದಿರಬಹುದು,
ಅವು ನುಡಿಯಲಾರವು;
ಮುಡಿಪು.
ಅದೆಷ್ಟೋ ಗೆಳೆಯರು
ತಿಂಡಿ ನೀಡುತ್ತಾರೆ
ಆಟವಾಡುತ್ತಾರೆ
ಎದ್ದಾಗ ಚಪ್ಪಾಳೆ ತಟ್ಟಿ,
ಬಿದ್ದಾಗ ಮದ್ದು ಹಚ್ಚುತ್ತಾರೆ
ಪವಾಡದಂತೆ ಎತ್ತಿ ಬಿಡುತ್ತಾರೆ
ಮುತ್ತು ಕೊಡುತ್ತಾರೆ.
ನಂಬಿಕೆಯು ಬೆಳೆದಂತೆ
ಸ್ನೇಹ ಉಳಿಯುವುದು
ಪ್ರೀತಿ ಬಾಳುವುದು.
ಎಂದೂ
ಪ್ರೀತಿ ಕೊಟ್ಟವರಲ್ಲಷ್ಟೇ
ಮುತ್ತಿನ ಬೆಲೆಯ ಕೇಳಬೇಕು;
ಅದು ಯಾರೆಂದು ತಿಳಿದು
ಕೃತಜ್ಞತೆ ಹೇಳಬೇಕು.
✍️ ಶಿವಕುಮಾರ ಸಾಯ 'ಅಭಿಜಿತ್'
🔵🔵
Comments
Post a Comment