ಆದ್ಯತೆ
ಧ್ಯಾನವೆಂದರೆ
ನೀನು ನಿನ್ನೊಳಗೆ
ಒಂದಾಗುವುದು
ಒಂದೇ ಆಗಿ, ಶಾಶ್ವತವಾಗಿ
ಉಳಿಯುವುದು.
ನಿರ್ದ್ವಂದ್ವ;
ನಿಶ್ಚಿಂತೆ, ಸ್ಥಿರತೆ,
ಅಸ್ತಿತ್ವದ ಅಚಲತೆ;
ಅರಿವಿನ ಪುಳಕ,
ಕೈಚಳಕ;
ವಿದೇಹ ವಿವೇಕದ
ವಚನ.
ಅಮೂರ್ತದಿಂದ ಮೂರ್ತಕ್ಕೆ ಸಾಗಲು
ಕೈಹಿಡಿದ ಬೆಳಕೇ
ವಿಜ್ಞಾನ;
ಇಂತು
ಬಲಾಢ್ಯವಾಗುವುದೇ
ಪ್ರಜ್ಞಾನ.
ನಿನ್ನೊಡಲ ಬ್ರಹ್ಮಾಂಡದಲ್ಲಿ
ಬೆಳ್ಳಿ ಬೆಡಗಿನ ಸಂಭ್ರಮ;
ಉತ್ಸವದ ಉತ್ಸಾಹ,
ಹೊನಲು, ನಗೆಹಬ್ಬ!
✍️ ಶಿವಕುಮಾರ ಸಾಯ 'ಅಭಿಜಿತ್'
🔵🔵🔵🔵
Comments
Post a Comment