ಸ್ನೇಹದ ಪ್ರಪತ್ರ  ಸ್ನೇಹದ ಬೆಂಬಲಕ್ಕೆ  ಸಾವಿರ ನಮನವಿದೆ;  ಸಂತಸದ ಕಣ್ಣೀರಲ್ಲಿ  ಹೃದಯದ ಪ್ರೇಮವಿದೆ.  ಕಾಯುವವರಿವರು,  ಕನಿಕರಿಸುವವರು,  ಮೈದಡವಿ ಸವಿಯ ನೀಡುವವರು,  ಜೀವಪರ ನಿಂತ  ಸಂಕಲ್ಪ ಸಂಭೂತ  ದೇವದೇವತೆಗಳು.  ನಿಮ್ಮ ಕೈಗೆ ಕೈ ನೀಡಿ  ಚಪ್ಪಾಳೆ ಹೊಡೆಯುತ್ತೇನೆ  ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತೇನೆ  ಅನುಭವ-ಅನಿಸಿಕೆ ಹೇಳಿಬಿಡುತ್ತೇನೆ  ಪ್ರಾಮಾಣಿಕ ಪ್ರೀತಿ ಪರಿಶುದ್ಧತೆಯ ಪ್ರತೀಕವೆನ್ನುತ್ತಾ  ನೀವುಗಳನ್ನು ಸೇವಿಸಿ ಉಸಿರಾಡುತ್ತೇನೆ.  ನಿಜದ ಸ್ನೇಹಿತರೆ,  ನಿಮ್ಮವರದೊಂದು ಪಟ್ಟಿ ಸಿದ್ಧಪಡಿಸಿ,  ಆಗಾಗ ಬಿಡುಗಡೆಗೊಳಿಸಿ,  ಸಂಭ್ರಮಿಸಿ,  ಸಂಪೂರ್ಣ ಬೆಂಬಲಿಸಿ,  ಹಂಬಲಿಸಿ ಕರೆಯುತ್ತೇನೆ.  ಸ್ನೇಹವೆಂಬುದು ತಂಪು,  ಸ್ನೇಹವೆಂಬುದು ಆತ್ಮೀಯ,  ಸ್ನೇಹವೆಂಬುದು ಸ್ವಕೀಯ;  ಈ ಜಗವನ್ನು ಸ್ನೇಹಕ್ಕೆ ಸಿದ್ಧಪಡಿಸಿ  ನಿಮ್ಮನ್ನು ನಾನೇ ಆಯ್ದುಕೊಂಡಿದ್ದೇನೆ  ಸ್ನೇಹಕ್ಕಾಗಿ, ಸಂತೋಷಕ್ಕಾಗಿ,  ಸ್ನೇಹದ ರಾಜಗಿರಿಗಾಗಿ.  ✍️ಶಿವಕುಮಾರ ಸಾಯ 'ಅಭಿಜಿತ್'